ಬೆಳ್ತಂಗಡಿ; 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ ಜೂ.28 ನೇ ಸೋಮವಾರ ವ್ಯಾಕ್ಸಿನ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗಾಗಿ ಆಯಾಯ ಕಾಲೇಜಿನಲ್ಲೇ ತಾಲೂಕು ಆರೋಗ್ಯ ಇಲಾಖೆಯಿಂದ ಲಸಿಕೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬೆಳಿಗ್ಗೆ 10 ರಿಂದ ಸಾಯಂಕಾಲ 4 ರವೆರೆಗೆ ಲಸಿಕಾ ಅಭಿಯಾನ ನಡೆಯಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಶ್ರೀ ಕ್ಷೇ.ಧ. ಪ್ರಥಮ ದರ್ಜೆ ಕಾಲೇಜು, ಉಜಿರೆ – 750 ಡೋಸ್,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೇಲಂತಬೆಟ್ಟು-771 ಡೋಸ್,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ- 525 ಡೋಸ್,
ಸೈಂಟ್ ಆ್ಯಂಟನಿ ಪದವಿ ಪೂರ್ವ ಕಾಲೇಜು, ನಾರಾವಿ – 109 ಡೋಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳು
ಆಧಾರ್ ಕಾರ್ಡ್, ಕಾಲೇಜ್ ಐಡಿಯ ಜೆರಾಕ್ ಪ್ರತಿ, ಮೊಬೈಲ್ ಫೋನ್ ನೊಂದಿಗೆ ನೋಂದಾಯಿಸಿಕೊಂಡು ವೇಕ್ಸಿನ್ ಪಡೆಯಬಹುದು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಹರೀಶ್ ಪೂಂಜಾ ವಿನಂತಿಸಿದ್ದಾರೆ.