Posts

ಮಾ. 24: ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್‌ನಲ್ಲಿ ಮರ್‌ಹೂಮ್ ಕಾಜೂರು ತಂಙಳ್ ಆಂಡ್ ನೇರ್ಚೆ

1 min read

 




ಬೆಳ್ತಂಗಡಿ: ಮಸ್ಲಕ್ ತ್ತಅಲೀಮಿ ಸ್ಸುನ್ನಿಯ್ಯಾ ಮುಂಡಾಜೆ ಮತ್ತು ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ ವತಿಯಿಂದ ಎಂಡಿಸಿ, ಎಸ್‌ವೈಎಸ್, ಎಸ್ಸೆಸ್ಸೆಫ್ ಮತ್ತು ಎಸ್‌ಬಿಎಸ್ ಜಂಟಿ ಸಹಕಾರದೊಂದಿಗೆ, ನಮ್ಮನ್ನಗಲಿದ ಖ್ಯಾತ ಆಧ್ಯಾತ್ಮಿಕ ಗುರು, ಮರ್‌ಹೂಮ್ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ "ಕಾಜೂರು ತಂಙಳ್" ಆಂಡ್ ನೇರ್ಚೆ ಮತ್ತು ಏಕದಿನ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಮಾ.  24 ರಂದು ಜಮಲುಲ್ಲೈಲಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಮರ್‌ಹೂಮ್ ಕಾಜೂರು ತಂಙಳ್ ಸುಪುತ್ರ, ಖ್ಯಾತ ವಾಗ್ಮಿ ಹಾಗೂ ಸಂಘಟಕ ಸಯ್ಯಿದ್ ಕೆಪಿಎಸ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಜಮಲುಲ್ಲೈಲಿ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಕೆರೀಂ ಕೆ.ಎಸ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಡಿಸಿ ಗಲ್ಫ್ ಕಮಿಟಿ ಸ್ಥಾಪಕರಾದ ಕೆ.ಯು ಮುಹಮ್ಮದ್ ಸಖಾಫಿ ನೆರವೇರಿಸಲಿದ್ದಾರೆ. ಜಮಲುಲ್ಲೈಲಿ ಮಸ್ಜಿದ್ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಉದ್ಭೋದನೆ ನಡೆಸಲಿದ್ದಾರೆ. ಸಹಾಯಕ ಖತೀಬ್ ಸಿದ್ದೀಕ್ ಹಿಮಮಿ ಸಖಾಫಿ ವಿಶೇಷ ಉಪಸ್ಥಿತಿ ನೀಡಲಿದ್ದಾರೆ. ಪೆರ್ಲ ಮುರ‍್ರಿಸ್, ಖ್ಯಾತ ವಾಗ್ಮಿ ಮುಹಮ್ಮದ್ ರಫೀಕ್ ಸಅದಿ ಬಾಕಿಮಾರ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಸಮಾರಂಭದಲ್ಲಿ ಪುತ್ತಾಕ ಕೂಳೂರು, ಹಾಜಬ್ಬ, ಮುಹಮ್ಮದ್ ಜೈಭಾರತ್, ಇಬ್ರಾಹಿಂ ದರ್ಖಾಸು, ಅಬ್ದುಲ್ ಹಮೀದ್ ಮಂಗಳೂರು, ಬಶೀರ್ ಓಸ್ಟಿಯೋ, ಮುಬಾರಕ್ ಅಹಮ್ಮದ್ ಸುಳ್ಯ, ಅಶ್ರಫ್ ಆಲಿಕುಂಞಿ ಮುಂಡಾಜೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದ ಕೊನೆಗೆ ಅನ್ನದಾನ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕರೂ ಆಗಿರುವ ಜಮಾಅತ್ ಕಾರ್ಯದರ್ಶಿ ಶಬೀರ್ ಬಿಕೆಹೆಚ್ ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment