ಅವರು ಬೆಳ್ತಂಗಡಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃಮಂಡಳಿ, ದುರ್ಗಾವಾಹಿನಿ, ಬೆಳ್ತಂಗಡಿ ಪ್ರಖಂಡ ಕಾರ್ಯಕ್ರಮ ಆಯೋಜಿಸಲಿದ್ದು ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಅಪರಾಹ್ನ 3ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನದಿಂದ ಪ್ರಾರಂಭಗೊಂಡು ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದವರೆಗೆ ಶೌರ್ಯ ಸಂಚಲನದ ಮೆರವಣಿಗೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಕೇಸರಿ ಶಾಲು, ಬಿಳಿ ಅಂಗಿ, ಕೇಸರಿ ಪಂಚೆಯೊಂದಿಗೆ ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಎಲ್ಲಾ ಕಾರ್ಯಕ್ರಮಗಳಿಗೆ ರಿಕ್ಷಾ ಚಾಲಕರು, ಕಾರು ಇನ್ನಿತರ ವಾಹನ ಚಾಲಕ ಮಾಲಕರು, ಅಂಗಡಿ ಮಾಲಕರು ಬೆಂಬಲ ನೀಡುತ್ತಾ ಬಂದಿದ್ದು ಡಿ.13ರಂದು ಕೂಡ ತಾಲೂಕಿನ ಎಲ್ಲಾ ರಿಕ್ಷಾ ಚಾಲಕರು, ವಾಹನ ಚಾಲಕ ಮಾಲಕರು, ಅಂಗಡಿ ಮಾಲಕರು ಮಧ್ಯಾಹ್ನ ಎರಡು ಗಂಟೆಗಳ ಕಾಲ ಬಂದ್ ಮಾಡಿ ಸಹಕರಿಸಬೇಕು ಎಂದರು.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶಿರ್ವಚನ ನೀಡಿಲಿದ್ದಾರೆ. ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉದ್ಯಮಿ ರಾಗ್ನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಬೆಳ್ತಂಗಡಿ ಪ್ರಖಂಡ ಸಂಚಾಲಕ ಸಂತೋಷ್ ಅತ್ತಾಜೆ, ಗೋರಕ್ಷಾ ಪ್ರಮುಖ್ ರಮೇಶ್ ಉಪಸ್ಥಿತರಿದ್ದರು.