Posts

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4 ನೇ ಸ್ಥಾನ ಬಂದಿದ್ದ ಧರ್ಮಗುರುಗಳ ಪುತ್ರಿ ಆಯಿಷಾ ಕಿಲ್ಲೂರು ಇದೀಗ ಸಿ.ಎ ಪಾಸ್

1 min read


ಬೆಳ್ತಂಗಡಿ: 2021 ಜನವರಿಯಲ್ಲಿ ದೆಹಲಿ ಕೇಂದ್ರವಾಗಿಸಿ ನಡೆದ ಲೆಕ್ಕಪರಿಶೋದಕರ ಚಾರ್ಟಡ್ ಎಕೌಂಟ್ಟ್ (ಸಿ.ಎ) ಅಂತಿಮ ಪರೀಕ್ಷೆಯಲ್ಲಿ ಆಯಿಷಾ ಕಿಲ್ಲೂರು ಅವರು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಿಲ್ಲೂರು ಇದರ ಕಾರ್ಯದರ್ಶಿ ಹಾಜಿ ಕುಂತೂರು   ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಉಮೈಮಾ ದಂಪತಿಯ ಎರಡನೇ ಪುತ್ರಿಯಾಗಿರುವ ಆತಿಶಾ ಅವರು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದರು.ಬಳಿಕ ಪಿಯುಸಿಯಲ್ಲಿ 10 ನೇ ಟಾಪರ್ ಆಗಿದ್ದರು. ಸಿ.ಪಿ.ಟಿ  ಯಲ್ಲಿ ದೇಶದಲ್ಲಿ 21 ನೇ ಸ್ಥಾನ ಹಾಗೂ ಐಪಿಸಿಸಿ  ಯಲ್ಲಿ ಆಳ್ವಾಸ್ ಕಾಲೇಜಿಗೆ ಪ್ರಥಮ ರೆನಿಸಿಕೊಂಡಿದ್ದರು.

ಪ್ರಾಥಮಿಕ ಶಿಕ್ಷಣವನ್ನಿ ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಬಳಿಕ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ  ವ್ಯಾಸಂಗ ನಡೆಸಿದ್ದರು.  ಮಂಗಳೂರಿನ ಪ್ರತಿಷ್ಠಿತ  ಚಾರ್ಟಡ್ ಎಕೌಂಟ್ (ಸಿ. ಎ) ಅಬ್ದುಸ್ಸಮದ್ ಅವರಲ್ಲಿ ತರಬೇತಿ ಪಡೆದುಕೊಂಡಿದ್ದರು.

ಆಯಿಷಾ ಅವರ ಅಕ್ಕ ಪ್ರಸ್ತುತ ಕಾಜೂರು ರಹ್ಮಾನಿಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ‌ ವೃತ್ತಿ‌ಸಲ್ಲಿಸುತ್ತಿದ್ದು, ಸಹೋದರ ಆಶಿಕ್ ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ನಿರತರಾಗಿದ್ದಾರೆ.  ತಂಗಿ 

ಬೆದ್ರಬೆಟ್ಟು ಮರಿಯಾಂಬಿಕ ಆಂಗ್ಲ ಮಾಧ್ಯಮದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment