ಬೆಳ್ತಂಗಡಿ; ಬದ್ರಿಯಾ ಜುಮಾ ಮಸೀದಿ ಸವಣಾಲು ಇಲ್ಲಿನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಹೆಚ್ ಹಾಮದ್ ಅವರ ಪುತ್ರ ಇಸ್ಮಾಯಿಲ್(30ವ.) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಮಧ್ಯೆ ಅವರಿಗೆ ಕೋವಿಡ್ ದೃಢಪಟ್ಟಿದೆ.
ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅವರು ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದು, ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರೆಂದು ಹೇಳಲಾಗಿದೆ. ಶನಿವಾರವಷ್ಟೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರೇ ನಡೆದುಕೊಂಡು ತೆರಳಿದ್ದರೆಂದು ಮಾಹಿತಿ ಲಭಿಸಿದೆ. ಎಸ್.ಹೆಚ್ ಅಹಮ್ಮದ್ ಅವರ ಇಬ್ಬರು ಗಂಡು ಮಕ್ಕಳ ಪೈಕಿ ಇಸ್ಮಾಯಿಲ್ ಕಿರಿಯವರಾಗಿದ್ದಾರೆ. ಓರ್ವೆ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ಇಸ್ಮಾಯಿಲ್ ಅವರು ವಿವಾಹವಾಗಿ ಎಂಟು ವರ್ಷ ಕಳೆದರೂ ಇನ್ನೂ ಅವರಿಗೆ ಮಕ್ಕಳಾಗಿರಲಿಲ್ಲ ಎಂದು ತಿಳಿದುಬಂದಿದೆ.
ಮೃತರ ಅಂತ್ಯಸಂಸ್ಕಾರ ವಿಧಿಗಳನ್ನು ಕೋವಿಡ್ ನಿಯಮಾವಳಿ ಅನುಸರಿಸಿ ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದ ಸಹಾಯ್ ತಂಡ ನೆರವೇರಿಸಿದೆ.