ಬೆಳ್ತಂಗಡಿ: ವಾಕಿಂಗ್ ಹೋಗಿದ್ದ ವೇಳೆ ಬೈಕ್ ಡಿಕ್ಕಿಹೊಡೆದು ಗಂಭೀರ ಗಾಯಗೊಂಡಿದ್ದ ನಿವೃತ್ತ ಗ್ರಾಮ ಕರಣಿಕ ಚಂದ್ರಮೋಹನ ರೈ(80ವ.) ಉಜಿರೆ ನಿಧನಹೊಂದಿದ್ದಾರೆ.
ಶನಿವಾರ ಸಂಜೆ ಅವರು ವಾಕಿಂಗ್ ಹೋಗಿದ್ದ ವೇಳೆ ಅವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು.
ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಜಿರೆ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕೊಂಡೊಯ್ಯುವಂತೆ ಹೇಳಿದ್ದು, ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಭಾನುವಾರ ಅವರು ನಿಧನರಾಗಿದ್ದಾರೆ.