ಇಸ್ಲಾಮ್ ಧರ್ಮವನ್ನು ವಾಚಾಮಗೋಚರ ನಿಂದಿಸಲಾಗಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಪೊಲೀಸರಿಗೆ ದೂರು ನೀಡಿದೆ.
ಪ್ರತಿಭಟನಾ ಭಾಷಣದುದ್ದಕ್ಕೂ ಇಸ್ಲಾಂ ಧರ್ಮದ ಬಗ್ಗೆ, ಮದರಸದ ಬಗ್ಗೆ, ಪ್ರವಾದಿಯವರ ಬಗ್ಗೆ ತೀರಾ ಕೆಟ್ಟದಾಗಿ, ಪ್ರಚೋದನಾಕಾರಿಯಾಗಿ, ಜನರ ಧಾರ್ಮಿಕ ನಂಬಿಕೆ ದಕ್ಕೆ ತರುವಂತಹ ರೀತಿಯಲ್ಲಿ ಮಾತನಾಡಲಾಗಿದೆ. ಇದು ಕೋಮಗಲಭೆಗೆ ಪ್ರಚೋದನೆ ನೀಡುವಂತಹದ್ದು. ಇದರಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದ ನಮಗೆ ಬೆದರಿಕೆಯನ್ನು ಒಡ್ಡಿ ,ಕೋಮು ಸಾಮರಸ್ಯಕ್ಕೆ ದಕ್ಕೆ ತರುವಂತಹ ಹೇಳಿಕೆಯನ್ನು ಬಹಿರಂಗವಾಗಿ ನೀಡಲಾಗಿದೆ. ಕನ್ನಯ್ಯಲಾಲ್ ರವರ ಹತ್ಯೆಯ ಪ್ರತೀಕಾರವನ್ನು ತೀರಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿಲಾಗಿದ್ದು ಇದು ಜೀವಬೆದರಿಕೆಯೂ ಆಗಿರುತ್ತದೆ.
ಆದುದರಿಂದ ಈ ಸಭೆಯಲ್ಲಿ ಭಾಷಣ ಮಾಡಿದ ಮತ್ತು ಕುಮ್ಮಕ್ಕು ನೀಡಿದ ದಿನಕರ ಆದೇಲು, ನವೀನ್ ನೆರಿಯ ಮತ್ತಿತರ ಆರೋಪಿತರುಗಳ ವಿರುದ್ಧ ಭಾರತ ದಂಡ ಸಂಹಿತೆ ಕಠಿಣ ಕಾಯ್ದೆಗಳ ಕಲಂನಡಿಯಲ್ಲಿ ಪ್ರಕರಣ ದಾಖಲಿಸುವಂತೆ ಇತ್ತಾಯಿಸಲಾಗಿದೆ.
ನಿಯೋಗದ ಜೊತೆ ಕೆ.ಪಿ.ಸಿ.ಸಿ.ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧಕ್ಷರಾದ ಖಾಲಿದ್ ಕಕ್ಯಾನ, ವಿನ್ಸೆಂಟ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಕರೀಮ್' ಅಲ್ಪಸಂಖ್ಯಾತ ನಗರ ಘಟಕ ಬೆಳ್ತಂಗಡಿ ಸಂಘಟನೆ ಕಾರ್ಯದರ್ಶಿ ರಮೀಝ್ ರಾಝ, ರಫೀಕ್ ಲಾಯ್ಲ ಹಾಗೂ ಯುವ ಕಾಂಗ್ರೆಸ್ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಆರೀಫ್ ಕಕ್ಯಾನ ಉಪಸ್ಥಿತರಿದ್ದರು.