Posts

ಮುಂಡಾಜೆ: ಗುಡ್ಡ ಕುಸಿದು ಮನೆ ಅಪಾಯದಲ್ಲಿ || ಹಟ್ಟಿ ಕುಸಿದು ಜಾನುವಾರು ಸಾವು

0 min read




ಬೆಳ್ತಂಗಡಿ: ಮುಂಡಾಜೆ ಗ್ರಾಮದ ಪಿಲತಡ್ಕ ಎಂಬಲ್ಲಿ ಶ್ರೀಧರ ಪೂಜಾರಿಯವರ ಮನೆಗೆ ಗುಡ್ಡ ಕುಸಿದು ಬಿದ್ದು ಅಪಾಯದ ಸ್ಥಿತಿ ಉಂಟಾಗಿದೆ.ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ವೇಣೂರು ಸುದೆರ್ದು ನಿವಾಸಿ ರೇವತಿಯವರ ಹಟ್ಟಿ ಕುಸಿದುಬಿದ್ದು ಗಬ್ಬದ ಜಾನುವಾರೊಂದು ದಾರುಣವಾಗಿ ಮೃತಪಟ್ಟಿದೆ.

ಹಟ್ಟಿಯಲ್ಲಿ ಒಟ್ಟು ನಾಲ್ಕು ಜಾನುವಾರುಗಳು ಇದ್ದವು ಎಂದು ಹೇಳಲಾಗಿದ್ದು ಈ ಪೈಕಿ 3 ದನಗಳು ಅಪಾಯದಿ೦ದ ಪಾರಾಗಿದೆ.

ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೃತ ದನದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಉಮೇಶ್ ಕೂಡ ‌ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment