Posts

ಪೆರಿಂಜೆಯಲ್ಲಿ ಬೆಳ್ತಂಗಡಿ ತಾಲೂಕು 17 ನೇಯ ಸಾಹಿತ್ಯ ಸಮ್ಮೇಳನಕ್ಕೆ ಸಕಲ‌ ಸಿದ್ಧತೆ

2 min read

ಬೆಳ್ತಂಗಡಿ : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ  ಇದರ ವತಿಯಿಂದ ಬೆಳ್ತಂಗಡಿ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.23ರಂದು ಮಂಗಳವಾರ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನ ಪೆರಿಂಜೆ, ಹೊಸಂಗಡಿ ಇಲ್ಲಿ ನಡೆಯಲಿದೆ.


ಈ ಬಗ್ಗೆ ಅಂತಿಮ‌ಸುತ್ತಿನ‌ ಸಭೆಯು ಸೋಮವಾರ ನಡೆಯಿತು. ಹೊಸಂಗಡಿ ಗ್ರಾ.ಪಂ ಅಧ್ಯಕ್ಷ ಕರುಣಾಕರ ಪೂಜಾರಿ  ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ  ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಪರಿಷತ್ತು ಧ್ವಜಾರೋಹಣ ಹಾಗೂ ಕ.ಸಾ.ಪ ಬೆಳ್ತಂಗಡಿ ತಾಲೂಕು  ಅಧ್ಯಕ್ಷ ಡಾ| ಬಿ. ಯಶೋವರ್ಮ ಸಮ್ಮೇಳನ ಧ್ವಜಾರೋಹಣ ಮಾಡಲಿದ್ದಾರೆ. ಬಿ.ರಾಮನಾಥ ಭಟ್ ಸಮ್ಮೇಳನಾಧ್ಯಕ್ಷತೆಯಲ್ಲಿ‌‌ ನಡೆಯುವ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ  ಮೂಡುಬಿದಿರೆ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಚಾರುಮುಡಿ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಸಮ್ಮೇಳನ ಸಂಯೋಜನಾ ಸಮಿತಿಯ ಎ. ಜೀವಂಧರ ಕುಮಾರ್ ಪಡ್ಯೋಡಿಗುತ್ತು, ತಾ.ಪಂ ಸದಸ್ಯ ಓಬಯ್ಯ ಉಪಸ್ಥಿತರಿರಲಿದ್ದಾರೆ. 


ಉಪನ್ಯಾಸಗಳು;

ಬೆಳಿಗ್ಗೆ ೧೧.೩೦ರಿಂದ ೧೧.೫೦ರವರೆಗೆ ಪ್ರೊ| ಗಣಪತಿ ಭಟ ಕುಳವರ್ಮರವರಿಂದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ| ಹೆಚ್.ಎಸ್ ವೆಂಕಟೇಶ ಮೂರ್ತಿ ಕವಿ ಕಾವ್ಯ ಪರಿಚಯ,  ೧೧.೫೫ರಿಂದ ೧೨ರವರೆಗೆ ಬಾಲ್ಯ ಶಂಕರ ಭಟ್ಟರವರಿಂದ ಎರ್ಮೋಡಿ ಗುಣಪಾಲ ಜೈನ್ ಸಂಸ್ಕರಣೆ, ೧೨.೦೫ರಿಂದ ೧೨.೨೫ರವರೆಗೆ ಎ. ಕೃಷ್ಣಪ್ಪ ಪೂಜಾರಿರವರಿಂದ ದೈವಾರಾಧನೆ ನಂಬಿಕೆ ನಡವಳಿಕೆ ಬಗ್ಗೆ ಉಪನ್ಯಾಸ, ೧೨.೩೦ರಿಂದ ೧ಗಂಟೆಯವರೆಗೆ ಖ್ಯಾತ ಜಲತಜ್ಞ ಶ್ರೀಪಡ್ರೆರವರಿಂದ ಜಲ ಸಂಸ್ಕೃತಿ-ಜನಜೀವನ ಉಪನ್ಯಾಸ,  ೧ಗಂಟೆಯಿಂದ ೧.೩೦ರವರೆಗೆ ಉಜಿರೆ ಶ್ರೀ ಧ.ಮಂ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕುವೆಂಪುರವರ ನಾಗಿ ಕಥನ ಕವನ ರೂಪಕ, ೧.೫೫ರಿಂದ ೨.೧೫ರವರೆಗೆ ನಾವೂರು ಆರೋಗ್ಯ ಕ್ಲೀನಿಕ್‌ನ ಡಾ| ಪ್ರದೀಪ ಆಟಿಕುಕ್ಕೆರವರಿಂದ ಕಗ್ಗ-ಜೀವನ ಮೌಲ್ಯ ಉಪನ್ಯಾಸ, ೨.೨೦ರಿಂದ ೨.೨೫ರವರೆಗೆ ಹರೀಶ್ ಆ

ಅದೂರುರವರಿಂದ ಡಾ| ಶ್ರೀಧರ ಕಂಬಳಿ ಪೆರಿಂಜೆ ಗುತ್ತು‌ಅವರ ಸಂಸ್ಮರಣೆ, ೨.೩೦ರಿಂದ ೨.೫೦ರವರೆಗೆ ಡಾ| ಯೋಗೀಶ್ ಕೈರೋಡಿರವರಿಂದ ಶಿಕ್ಷಣದಲ್ಲಿ ಸಾಹಿತ್ಯ ಅಭಿರುಚಿ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 


೨.೫೦ರಿಂದ ೩.೧೦ರವರೆಗೆ ವೇಣೂರು ಸರಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಹಳೆಗನ್ನಡ ಕಾವ್ಯ ವಿಶೇಷತೆ –ಗಾಯನ ಕಾರ್ಯಕ್ರಮ ನಡೆಯಲಿದೆ.

 

ಅಪರಾಹ್ನ ೩.೧೫ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕ.ಸಾ.ಪ. ದ.ಕ ಜಿಲ್ಲಾ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದು, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ| ನಾ ಮೊಗಸಾಲೆ ಸಮಾರೋಪ ಭಾಷಣ ಮಾಡಲಿದ್ದಾರೆ.  ವಿಧಾನಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪ್‌ಸಿಂಹ ನಾಯಕ್, ಸ.ಸಂ ಸಮಿತಿ ಅಧ್ಯಕ್ಷ ಪಿ ಜಯರಾಜ ಕಂಬಳಿ, ಕಾರ್ಯಾಧ್ಯಕ್ಷ ಪಿ ಧರಣೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.

ಇದೇ ಸಂಧರ್ಭದಲ್ಲಿ ಶಾಸಕ‌ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ.

 ದೇವಿಪ್ರಸಾದ್ (ಪತ್ರಿಕೋದ್ಯಮ), ಡಾ| ರಾಮಕೃಷ್ಣ ಭಟ್, ಬೆದ್ರಡ್ಕ ಪೆರಿಂಜೆ (ವೈದ್ಯಕೀಯ), ಬಿ. ರಾಮಚಂದ್ರ ಶೆಟ್ಟಿ ಉಜಿರೆ(ಸಮಾಜ ಸೇವೆ), ಎಂ. ಕಮಲಾಜಿ ಎಸ್ ಜೈನ್, ಮುಖ್ಯಶಿಕ್ಷಕಿ ಬಜಿರೆ(ಶಿಕ್ಷಣ), ಗೋವಿಂದ ಭಟ್ ನಿಡ್ಲೆ (ಯಕ್ಷಗಾನ)ಡಿ.ಎ ರಹಿಮಾನ್ ತೋಟತ್ತಾಡಿ(ಸಾಮಾಜಿಕ ಜಾಗೃತಿ), ರವಿ ಅಳದಂಗಡಿ(ಕಂಬಳ)ದೇವು ಮರೋಡಿ(ಜಾನಪದ), ಕೊರಗಪ್ಪ ಶೆಟ್ಟಿ ಮದಕುಡೆ ಪೆರಿಂಜೆ(ಉದ್ಯಮ), ಜೆರೋಮಿ ಎಸ್ ಮೋರಸ್ ಪೆರಿಂಜೆ (ಹೈನುಗಾರಿಕೆ), ಅನಿಲ್ ಬಳಂಜ (ಕೃಷಿ), ಬದುಕು ಕಟ್ಟೋಣ ಬನ್ನಿ ಸಂಘಟನೆ ಉಜಿರೆ(ಸೇವೆ)ಪ್ರವೀಣ ಜೈನ್ ಪೆರಿಂಜೆ (ಪ್ರತಿಭಾ ಪುರಸ್ಕಾರ), ದಿವ್ಯ ಅಂಚನ್ ಗುಂಡೂರಿ (ಪ್ರತಿಭಾ ಪುರಸ್ಕಾರ)ರವರಿಗೆ ಮುಂತಾದವರಿಗೆ ಸನ್ಮಾನ ನಡೆಯಲಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment