ಬೆಳ್ತಂಗಡಿ; ಶನಿವಾರ ಸಂಜೆ ವೇಳೆಗೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ಗಾಯಗೊಂಡಿದ್ದ ಯುವ ಕಾಂಗ್ರೆಸ್ ಮುಖಂಡ, ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಅವರು, ತಾನು ಅಪಾಯದಿಂದ ಪಾರಾಗಿದ್ದು ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದೇನೆ. ಆತಂಕಪಡಬೇಕಾದದ್ದಿಲ್ಲ ಎಂದು ಫೇಸ್ ಬುಕ್ ವಾಲ್ ನಲ್ಲಿ ತಿಳಿಸಿದ್ದಾರೆ.
ಹೇಳಿಕೆಯಲ್ಲಿ ತಿಳಿಸಿರುವ ಅಭಿನಂದನ್ ಅವರು, ನಾನು ಪ್ರಯಾಣಿಸುತ್ತಿದ್ದ ಕಾರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು . ಆದರೆ ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದ ಮತ್ತು ಹಾರೈಕೆಗಳು ಮತ್ತು ದೈವ ಬಲದ ಕಾರಣಗಳಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದರಿಂದ ಪಾರಾಗಿದ್ದೇನೆ. ಪ್ರಸ್ತುತ ಸಣ್ಣಪುಟ್ಟ ಗಾಯಗಳೊಂದಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಆತಂಕಕ್ಕೊಳಪಟ್ಟು ಕರೆ ಮಾಡುತ್ತಿರುವ ಎಲ್ಲಾ ಹಿತೈಷಿಗಳು ಮತ್ತು ಸ್ನೇಹಿತರ ಕರೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ . ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮತ್ತು ಹಾರೈಕೆಗಳಿಗೆ ನಾನು ಸದಾ ಅಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಅಭಿನಂದನ್ ಹರೀಶ್ ಕುಮಾರ್ ಅವರ ಕಾರು ಅಪಘಾತಕ್ಕೊಳಗಾಗುತ್ತಿರುವಂತೆ ಸ್ಥಳೀಯರ ಮಾಹಿತಿ ಆಧರಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಮತ್ತು ಸಂಗಡಿಗರು ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿಕ "ಕಾರು ಅಪಘಾತದಿಂದ ಅಭಿನಂದನ್ ಅವರಿಗೆ ಗಂಭೀರ ಗಾಯವಾಗಿದೆ" ಎಂದು ವದಂತಿಗಳು ಹಬ್ಬಿತ್ತು. ಇದೀಗ ಅಭಿನಂದನ್ ಅವರೇ ಪ್ರತಿಕ್ರಿಯಿಸಿದ್ದು ಆತಂಕ ಮತ್ತು ವದಂತಿಗಳಿಗೆ ತೆರೆ ಎಳೆದಿದ್ದಾರೆ.