ಬೆಳ್ತಂಗಡಿ; ತಂದೆಯನ್ನೇ ಮಗನೊಬ್ಬ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೋಮವಾರ ನಡೆದಿದೆ.
ಆರೋಪಿ
ಶ್ರೀಧರ ಪೂಜಾರಿ (55ವ.) ಅವರನ್ನು ಅವರ ಪುತ್ರ ಹರೀಶ ( 27ವ.) ಕೊಲೆಗೈದಿದ್ದಾನೆ. ಘಟನೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಬಳಗದವರು ಧಾವಿಸಿದ್ದು ಸ್ಥಳ ಮಹಜರು ನಡೆಸುತ್ತಿದ್ದಾರೆ. ಕೃತ್ಯವೆಸಗಿದ ಮಗನನ್ನು ಬಂಧಿಸಲಾಗಿದೆ.