ಬೆಳ್ತಂಗಡಿ; ತಾಲೂಕಿನ ಕಳೆಂಜ ಗ್ರಾಮದ ಪಾಂಗಾಳ ಎಂಬಲ್ಲಿ ಭಾರೀ ಮಳೆಗೆ ಸುಮಾರು 8 ಮನೆಗಳು ಹಾನಿಗೊಳಗಾಗಿದ್ದ ಪ್ರದೇಶದ ಕುರಿತು ಕಳೆಂಜ ಗ್ರಾ.ಪಂ. ಜನಪ್ರತಿನಿಧಿಗಳು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ ಶಾಸಕರು ಧನಸಹಾಯ ಸಹಿತ ತುರ್ತು ಸ್ಪಂದನೆ ನೀಡಿದ್ದಾರೆ.
ಶಾಸಕ ಹರೀಶ್ ಪೂಂಜ ಅವರು ಬೆಂಗಳೂರು ತೆರಳಿದ್ದರಿಂದ, ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಹಾಗು ತಮ್ಮ ಆಪ್ತ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ ಮೇರೆಗೆ ಬುಧವಾರ ಹಾನಿಗೊಳಗಾದ ಫಲಾನುಭವಿಗಳ
ಮನೆಗಳನ್ನು ಪರಿಶೀಲನೆ ನಡೆಸಿ, ತುರ್ತು ದುರಸ್ತಿಗೆ ಶಾಸಕರ ವೈಯಕ್ತಿಕ ವತಿಯಿಂದ ಧನ ಸಹಾಯ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಗ್ರಾ.ಪಂ. ಸದಸ್ಯರಾದ ಹರೀಶ್ ಕೆ.ಬಿ., ಗಂಗಾಧರ.ಕೆ, ಮಂಜುನಾಥ, ಲಲಿತಾಕ್ಷಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಶಿವಪ್ಪ ಗೌಡ, ನಿರಂಜನ್, ಕಾರ್ಯದರ್ಶಿ ರಾಘವ ಗೌಡ, ಬಿಜೆಪಿ ಮಹಾಶಕ್ತಿಕೇಂದ್ರದ ಸದಸ್ಯ ಧನಂಜಯ ಗೌಡ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.