ಬೆಳ್ತಂಗಡಿ; ಯುವ ಉದ್ಯಮಿ ಹಾಗೂ ಸಂಘಟಕ ಅಶ್ವತ್ಥ ಹೆಗ್ಡೆ ಬಳಂಜ ಅವರ ವತಿಯಿಂದ ಬಳಂಜ ಆಸುಪಾಸಿನ 85 ಕುಟುಂಬಗಳಿಗೆ ಆಹಾರದ ವಸ್ತುಗಳ ಕಿಟ್ ಅನ್ನು ರವಿವಾರ ವಿತರಿಸಿ ಮಾದರಿಯಾದರು.
ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಅಶ್ವತ್ಥ ಹೆಗ್ಡೆ ಅವರು, ಬಡವರಿಗೆ ಎಂದು ಕಿಟ್ ಕೊಟ್ಟಿಲ್ಲ. ನಾನೂ ಕೂಡ ಇದೇ ಊರಿನಲ್ಲಿಬಡತನದ ಹಿನ್ನೆಲೆಯಲ್ಲೇ ಹುಟ್ಟಿ ಬೆಳೆದವನು.ಈ ಕಾಲಘಟ್ಟ ಎಲ್ಲರನ್ನೂ ಬಡವರನ್ನಾಗಿಸಿದೆ. ದೇವರ ಪ್ರಸಾದ ರೂಪದಲ್ಲಾಗಬೇಕು ಎಂದು ಕಾರ್ಯಕ್ರಮವನ್ನು ದೇವಾಲಯದಲ್ಲಿ ಇಟ್ಟುಕೊಳ್ಳಲಾಗಿದೆ ಎಂದರು. ಗ್ರಾ.ಪಂ ಅಧ್ಯಕ್ಷ ಹೇಮಂತ್, ದೇವಳದ ಆಡಳಿತದಾರ ಶೀತಲ್ ಪಡಿವಾಳ್, ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ, ಹಿಂದೂ ಯುವ ಶಕ್ತಿ ಆಲಡ್ಕ ಇದರ ಅಧ್ಯಕ್ಷ ದೇವುದಾಸ್ ಮೊದಲಾದವರು ಉಪಸ್ಥಿತರಿದ್ದರು.
ಕೃಷಿಕ ದಿನೇಶ್ ಭಟ್ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿ ವಂದಿಸಿದರು.