ಬೆಳ್ತಂಗಡಿ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ರಾಜ್ಯ ಸಂಸ್ಥೆ ಇವರು ಹೀರೆಕ್ ಗರಿ ರಾಜ್ಯ ಪುರಸ್ಕಾರ ಪರೀಕ್ಷೆ ಯನ್ನು ಆಯೋಜಿಸಿದ್ದು, ಎಸ್‌ಡಿಎಂ ಬೆಳ್ತಂಗಡಿ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುತ್ತಾರೆ.
ಪರೀಕ್ಷೆ ಬರೆದ 11 ಮಂದಿ ಬುಲ್ ಬುಲ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರವನ್ನು ಪಡೆದಿದ್ದು, ಇವರಿಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶ್ರೀ ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯ ಕ್ಯಾಪ್ಟನ್ ಪ್ರಮೀಳಾ ಇವರು ತರಬೇತಿ ನೀಡಿರುತ್ತಾರೆ.
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಯಂ. ಆರ್ ಅವರು ಸಹಕಾರ ನೀಡಿರುತ್ತಾರೆ.