ಬೆಳ್ತಂಗಡಿ; ಹೊಂಡಗುಂಡಿಗಳಿಂದ ಕೂಡಿದ ಉಜಿರೆ ಗ್ರಾಮದ ಗಾಂಧಿನಗರ ಕಕ್ಕೆಜಾಲು ರಸ್ತೆಯನ್ನು ಸ್ಥಳೀಯ ಅಭಿವೃದ್ಧಿಪರ ಚಿಂತಕರು ಜೊತೆ ಸೇರಿ ಶ್ರಮಾದಾನದ ಮೂಲಕ ತಾತ್ಕಾಲಿಕ ದುರಸ್ತಿ ನಡೆಸಿದರು.
ಸ್ಥಳೀಯ ನಿವಾಸಿ ಸಾಮಾಜಿಕ ಕಾರ್ಯಕರ್ತ ಯು.ಕೆ ಅಬ್ದುಶ್ಶುಕೂರ್ ಅವರ ನೇತೃತ್ವದಲ್ಲಿ ಅತಿಶ್, ಬಾತೀಶ್, ಇರ್ಷಾದ್, ಸಲ್ಮಾನ್, ಇಲ್ಯಾಸ್, ಸರ್ವಾನ್, ಅಫ್ನಾನ್, ಜೈಸನ್, ಶೋಯಿಬ್, ಟಿ.ಜೆ ಮೊರಾಸ್,ಸೈಫುದ್ದೀನ್, ಸುಹೇಲ್ ಸಿಯಾಬುದ್ದೀನ್ ಆಸಿರ್ ಸಫ್ವಾನ್ ಕಬೀರ್ ಮೊದಲಾದವರು ಶ್ರಮಾದಾನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡರು.
ಗಾಂಧಿನರ ರಸ್ತೆಯನ್ನು ಅವಲಂಬಿಸಿ ಅನೇಕ ಕುಟುಂಬಗಳಿದ್ದು, ಇಲ್ಲಿನ ನಿವಾಸಿಗಳಿಗೆ ಆಸ್ಪತ್ರೆಗೆ, ಪೇಟೆಗೆ ಸಂಚಾರ ಮಾಡಬೇಕಾದರೆ ಪರ್ಯಾಯ ದಾರಿ ಇಲ್ಲದಾಗಿದೆ.
ತಮ್ಮ ಸಮಸ್ಯೆ ಬಗ್ಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ತಾವೇ ಮುಂದಾಗಿ ಶ್ರಮಾದಾನ ಮಾಡುವ ಮೂಲಕ ಸೀಲ್‌ಡೌನ್ ಸಮಯವನ್ನು ಇಲ್ಲಿನ ಅಭಿವೃದ್ಧಿ ಪರ ಕಾರ್ಯಕರ್ತರ ತಂಡ ಸದುಪಯೋಗಪಡಿಸಿ ಮಾದರಿಯಾಗಿದ್ದಾರೆ.