ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರ್ ಇದರ ವತಿಯಿಂದ, ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಸಂಸ್ಥೆಯ ಸಿಬ್ಬಂದಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ , ಸೇನಿಟೈಸರ್ ಮತ್ತು ಗೌರವ ಧನವನ್ನು ಮಂಗಳವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಹಲವು ಕುಟುಂಬಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಜೂರು ಜಮಾಅತ್ತಿನ ಸಂಕಷ್ಟಗಳಿಗೆ ಸ್ಪಂದಿಸಿದ ಕಾಜೂರಿನ ಯುವಕರು, ಅನಿವಾಸಿ ಭಾರತೀಯ ಕಾಜೂರ್ ಯುವಕರು, ಹಲವಾರು ಸಹ ಸಂಘಟನೆಗಳು, ಪಂಚಾಯತ್ ಸದಸ್ಯರುಗಳು, ಪಂಚಾಯತ್ ಅಧಿಕಾರಿಗಳು, ದಾನಿಗಳು , ಆಹಾರದ ಕಿಟ್ ಗಳು, ಔಷದಿಗಳು, ಸೇನಿಟೈಸರ್, ಆಂಬುಲೆನ್ಸ್ ಸೇವೆ, ಇನ್ನಿತರ ಹಲವಾರು ಸಮಾಜಮುಖಿ ಸೇವಾ ಕಾರ್ಯ ಗಳನ್ನು ಮಾಡಿ ಸಹಕರಿಸಿದ ಎಲ್ಲರಿಗೂ ಸಯ್ಯದ್ ಕಾಜೂರ್ ತಂಙಳ್ ದುಆ ಆಶೀರ್ವಾದ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ. ಯು ಇಬ್ರಾಹಿಂ ಅಭಿನಂದನಾ ಮಾತುಗಳನ್ನಾಡಿ, ಕಾಜೂರ್ ಜಮಾತ್ ನಲ್ಲಿ ಇನ್ಯಾರಾದರೂ ಕೋವಿಡ್ ಕಾರಣದಿಂದ ಸಂಕಷ್ಟದಲ್ಲಿದ್ದಲ್ಲಿ ಆಡಳಿತ ಸಮಿತಿಯನ್ನು ಸಂಪರ್ಕಿಸುವಂತೆ ವಿನಂತಿಸಿದರು. ಇದೇ ಕಾರ್ಯಕ್ರಮದಲ್ಲಿ ಕೋವಿಡ್ ದೃಢಪಟ್ಟಿದ್ದ ಕುಟುಂಬಗಳಿಗೂ ಅಗತ್ಯ ವಸ್ತುಗಳ ಕಿಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು , ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಹಾಯ್' ತಂಡದಲ್ಲಿ ಕೆಲಸ ಮಾಡುವ ಕಾಜೂರು ಜಮಾಅತ್ 6 ಮಂದಿಗೆ ಸನ್ಮಾನ
ಕಾಜೂರ್ ಜಮಾಅತ್ ವ್ಯಾಪ್ತಿಯ ಎಸ್ಸೆಸ್ಸೆಫ್ ಯುವಕರು ತಾಲೂಕು ಮುಸ್ಲಿಂ ಜಮಾಅತ್ ನೇತೃತ್ವದ 'ಸಹಾಯ್' ಕೋವಿಡ್ ತಂಡದಲ್ಲಿ ಗುರುತಿಸಿಕೊಂಡು ಕೋವಿಡ್‌ನಿಂದ ಮೃತಪಟ್ಟವರ ದಫನ, ಮೆಡಿಸಿನ್, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಮುಂತಾದ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಕಾರ್ಯವನ್ನು ಸ್ಲಾಘಿಸಿ ಅವರಿಗೆ ಆಹಾರ ಸಾಮಾಗ್ರಿಯ ಕಿಟ್ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.