Posts

ಇಳಂತಿಲದಲ್ಲಿ "ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ- ಸ್ವಚ್ಚತಾ ಅಭಿಯಾನ" ಕ್ಕೆ ಚಾಲನೆ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ನೇತೃತ್ವದಲ್ಲಿ ಕಾರ್ಯಕ್ರಮ

1 min read


ಬೆಳ್ತಂಗಡಿ: ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಎಂಬ ಘೋಷಣೆಯೊಂದಿಗೆ ಕಾರ್ಯಚರಿಸುತ್ತಿರುವ ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದ ಎಸ್ಸೆಸ್ಸೆಫ್, ಎಸ್‌ವೈಎಸ್, ಕೆಸಿಎಫ್ ಸಹಯೋಗದ "ಸಹಾಯ್"  ಉಪ್ಪಿನಂಗಡಿ ಸರ್ಕಲ್ ನ ಕುಪ್ಪೆಟ್ಟಿ ಸೆಂಟರ್ ವ್ಯಾಪ್ತಿಯ ಸ್ವಚ್ಚತಾ ಅಭಿಯಾನವು ಸ.ಹಿ.ಪ್ರಾ ಶಾಲೆ  ಇಳಂತಿಲ ಇದರ ವಠಾರದಲ್ಲಿ ನಡೆಯಿತು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ನ್ಯಾಯವಾದಿ ಮನೋಹರ್ ಕುಮಾರ್,  "ಸಹಾಯ್" ತಂಡ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದು, ಜಾತ್ಯಾತೀತವಾಗಿ ನೊಂದವರ ನೆರವಿಗೆ ದಾವಿಸುವ ಮೂಲಕ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವುದನ್ನು ಗಮನಿದ್ದೇವೆ ಎಂದರು.

ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ  ಪ್ರಸಾದ್ ಕೆ.ವಿ. ಭಟ್ ಮಾತನಾಡುತ್ತಾ, ನಮ್ಮ ಗ್ರಾಮದಲ್ಲಿ  ಕೋರೋನಾ ಪಾಸಿಟಿವ್ ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಝರ್ ಸೇವೆ, ಕಿಟ್ ವಿತರಣೆ ಮೂಲಕ ಸೇವೆ ಸಲ್ಲಿಸಿ ಇದೀಗ ಸ್ವಚ್ಚತೆಯನ್ನೂ ಕೈಗೊಂಡಿದ್ದು ಮಾದರಿಯಾಗಿದೆ ಎಂದರು. 

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ, ಸಮಿತಿ ಸದಸ್ಯ ಈಶ್ವರ ಗೌಡ ಮುಂತಾದವರು ಉಪಸ್ಥಿತರಿದ್ದರು. 

ಸಹಾಯ್ ಕುಪ್ಪೆಟ್ಟಿ ವಲಯ ಉಸ್ತುವಾರಿ ಅತಾವುಲ್ಲಾ ಹಿಮಮಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಅಬ್ದುಲ್ ಖಾದರ್ ಮದನಿ ದುವಾ ಮಾಡಿದರು. ಗ್ರಾ. ಪಂ. ಸದಸ್ಯ ಸಿದ್ದೀಕ್ ಸ್ವಾಗತಿಸಿದರು.

ಸಹಾಯ್ ಉಪ್ಪಿನಂಗಡಿ ಸರ್ಕಲ್ ಉಸ್ತುವಾರಿ ಯನ್.ಎಂ ಶರೀಫ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಸಹಾಯ್ ತಂಡದ ನಾಯಕರಾದ ಜಿ.ಯಂ ಕುಂಞ ಜೊಗಿಬೊಟ್ಟು, ಕೆಎಮ್‌ಜೆ ಗ್ರಾಮ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕಣಿಯೂರು ಬ್ಲಾಕ್ ಕಾರ್ಯದರ್ಶಿ ಝಾಕಿರ್ ಹುಸೇನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಲತೀಫ್ ಕನ್ಯಾರಕೋಡಿ,  ಸಹಾಯ್ ಕುಪ್ಪೆಟ್ಟಿ ವಲಯ ತುರ್ತು ಸೇವ ತಂಡದ ಉಸ್ತುವಾರಿ ಶರೀಫ್ ಯನ್, ಯನ್.ಬಿ ಅಶ್ರಫ್ ಮಾಪಲ್  ಹಾಗೂ ಎಸ್ಸೆಸ್ಸೆಫ್, ಎಸ್‌ವೈಎಸ್ ಸ್ಥಳಿಯ ಶಾಖೆಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment