ಬೆಳ್ತಂಗಡಿ; ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ಬೆಳ್ತಂಗಡಿ ತಂಡದ ವೈದ್ಯಕೀಯ ವಿಭಾಗದ ವತಿಯಿಂದ ಶನಿವಾರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋವಿಡ್ ಬಾಧಿತ ಪ್ರದೇಶದ ಎಲ್ಲರ ಆರೋಗ್ಯ ತಪಾಸಣೆ ಮತ್ತು ಕಷಾಯ ತಯಾರಿಸುವ 12 ಬಗೆಯ ವಸ್ತುಗಳುಳ್ಳ ಕಿಟ್ ನೀಡಲಾಯಿತು.
ಸುದೆಮುಗೇರುವಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಚಾಲನೆ ನೀಡಿದರು. ವಾರ್ಡ್‌ನ ಹಿರಿಯ ಸದಸ್ಯ ಡಿ. ಜಗದೀಶ್ ವಾರ್ಡ್‌ನ ಪೂರ್ಣ ಚಿತ್ರಣ ನೀಡಿ ಮಾನವ ಸ್ಪಂದನದ ಕಾರ್ಯವನ್ನು ಅಭಿನಂದಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ಕೋವಿಡ್ ಇರುವ ಪ್ರತೀ ಮನೆಯವರಿಗೂ ಆತ್ಮ ಸ್ಥೈರ್ಯ ತುಂಬುವ ಕಾರ್ಯಮಾಡಿದರು.
ಪಟ್ಟಣ ಪಂಚಾಯತ್ ಸದಸ್ಯೆ ಗೌರಿ, ಸಿಬ್ಬಂದಿ ಕರುಣಾಕರ್, ಮಾನವ ಸ್ಪಂದನದ ಫಾ. ಬಿನೋಯ್, ಜೈಸನ್ ವೆರ್ನೂರು, ಅಜಿತ್ ಪಿ.ಎಮ್, ಎಂ.ಶರೀಫ್ ಬೆರ್ಕಳ ಭಾಗಿಯಾಗಿದ್ದರು.
ಬಳಿಕ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಮಾನವ ಸ್ಪಂದನ ತಂಡದ ಶುಷ್ರೋಶಕಿ ಜಾನ್ಸಿ ಡೇವಿಡ್ ಬಜಗೊಳಿ, ಸಹಾಯಕರಾದ ವಿಲಿಯಂ ಮತ್ತು ವಿನೂಷ್ ಇವರ ತಂಡ ಪಟ್ಟಣ ಪಂಚಾಯತ್‌ನ ಸೀಲ್ ಡೌನ್ ಆಗಿರುವ ಎಲ್ಲಾ ಮನೆಗಳಿಗೆ ವೈಯಕ್ತಿಕ ಭೇಡಿ ನೀಡಿ ಅವರ ಮನೆಯ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆ ನಡೆಸಿತು. ಉಸಿರಾಟದಲ್ಲಿ ಮತ್ತು ದೇಹ ಉಷ್ಣಾಂಶದಲ್ಲಿ ಏರುಪೇರು ಇದ್ದ ಇಬ್ಬರ ವರದಿಯನ್ನು ಆರೋಗ್ಯ ಇಲಾಖೆಗೆ ನೀಡಿ ವೈದ್ಯಕೀಯ ಸೇವೆ ದೊರಕಿಸಿಕೊಡಲಾಯಿತು.
ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ಸಂಯೋಜಿಸಿದರು.
ಕೋವಿಡ್ ಆರಂಭ ಕಾಲಘಟ್ಟದಲ್ಲಿ ಮೃತರ ಅಂತ್ಯಸಂಸ್ಕಾರಕ್ಕೂ ಭಯಪಡುವ ವಾತಾವರಣ ಇತ್ತು. ಕೆಲವೆಡೆ ಅಮಾನವೀಯ ಪ್ರಕರಣಗಳೂ ನಡೆದಿದ್ದವು. ಆದರೆ ಈಗ ಎಲ್ಲೆಡೆ ಜಾಗೃತಿಮೂಡಿದ್ದು ಮಾನವ ಹಕ್ಕುಗಳ ರಕ್ಷಣೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಘಟನೆಯ ಕಾರ್ಯವೈಖರಿಯನ್ನು ತಾ.ಆರೋಗ್ಯಾಧಿಕಾರಿ ಮತ್ತು ತಾ.ಪಂ ಇಒ ಅವರ ಸಲಹೆ ಪಡೆದು ವೈದ್ಯಕೀಯ ಸೇವೆ ಮತ್ತು ಇತರ ಸೇವೆಯತ್ತ ವಿಸ್ತರಿಸುತ್ತಿದ್ದೇವೆ.
ಪಿ.ಸಿ ಸೆಬಾಸ್ಟಿಯನ್
ಚೆರ್ಮೆನ್, ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ಬೆಳ್ತಂಗಡಿ.