ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನದಿಂದ ನಿಮಿಷ ನಿಮಿಷಕ್ಕೆ ಮಾಹಿತಿ ತಲುಪಿಸುವ ವ್ಯವಸ್ಥೆ ಆಗಿದೆ. ಈ ಬದಲಾವಣೆಯ ಕಾಲಘಟ್ಟದಲ್ಲಿ ವ್ಯವಸ್ಥೆ ಗೆ ಒಗ್ಗಿಕೊಂಡುಕೆಲಸ ಮಾಡುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ವತಿಯಿಂದ ಜು.3 ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೆ ಅನೇಕ ಬರಹಗಾರರಿಗೆ, ಚಿಂತನೆಗೆ ವೇದಿಕೆಯಾಗಿದೆ. ಇಂದು ಲೇಖನಗಳು ಕಡಿಮೆಯಾಗಿದೆ. ಹಿಂದೆ ಬರೆಯುವವರ ಮಧ್ಯೆ ಸ್ಪರ್ಧೆ ಇತ್ತು.ಈಗ ಕೋವಿಡ್‌ನಲ್ಲಿ ಮತ್ತೊಂದು ಅವಕಾಶ ಇದೆ. ಕೊರೊನಾ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಅವಕಾಶವಂಚಿತರಾಗಿರುವ ಕಾಲದಲ್ಲಿ ಅವರಿಗೆ ಅವಕಾಶ ಕೊಡಬಹುದಾ ಎಂದು ಲೋಚಿಸಬೇಕಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಪತ್ರಿಕೆಗಳು ಕ್ಷಿಪ್ರವಾಗಿ ಕಡಿಮೆಯಾಗಿದ್ರೆ ಜನರನ್ನು ಎಚ್ಚರಿಸಿದ ಮಾದ್ಯಮಗಳು ಕಾರಣ. ಆ ಕೆಲಸವನ್ನು ಕರ್ತವ್ಯದ ರೀತಿಯಲ್ಲಿ ಮಾಡಿದೆ. ಕೊರೊನಾ ನಿಯಂತ್ರಣದಲ್ಲಿ
ಸರಕಾರ ಎಷ್ಟು ಕಾರಣವೋ ಅಷ್ಟೇ ಮಾಧ್ಯಮವೂ ಕಾರಣ ಎಂದ ಶಾಸಕರು, ಪತ್ರಕರ್ತರು ಮತ್ತು ಪತ್ರಿಕೋದ್ಯಮ ಸಂಕಷ್ಟ ದಲ್ಲಿದೆ. ನೌಕರರ ಕಡಿತ, ಸಂಬಳ ಕಡಿತ ಆಗಿದೆ. ಎಲ್ಲಅ ಕ್ಷೇತ್ರದಂತೆ ಪತ್ರಿಕಾ ಕ್ಷೇತ್ರಕ್ಕೂ ಕೋವಿಡ್ ಕಷ್ಟ ಬಾಧಿಸಿದೆ ಈಬಗ್ಗೆ ನಾವೆಲ್ಲಾ ತಿಳಿದಿದ್ದೇವೆ ಎಂದರು.
ಪತ್ರಕರ್ತರ ಸಂಘಕ್ಕೆ ನಿವೇಶನಕೊಡಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಇದೆ. ಖಾಸಗಿಯಾಗಿ ನಿವೇಶನ ಖರೀದಿಸುವದಾದರೆ
ಆರ್ಥಿಕ ಸಹಕಾರ ಕೊಡಲೂ ಸಿದ್ದನಿದ್ದೇನೆ. ಸರಕಾರದ ಕಡೆಯಿಂದ ಆಗೂದಾದರೂ ನಾನು ಮತ್ತು ಸರಕಾರದಿಂದ ಸಹಕಾರ ಕೊಡುತ್ತೇನೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಶುಭಕೋರಿದರು.
ತಾ. ಪತ್ರಕರ್ತರ ಸಂಘದ ಅಧ್ಯಕ್ಷ, ಅಚುಶ್ರೀ ಬಾಂಗೇರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮನೋಹರ್ ಬಳಂಜ ಮತ್ತು ಲಿಖಿತಾ ದಂಪತಿಯ ವತಿಯಿಂದ, ಅಕಾಲಿಕವಾಗಿ ಅಗಲಿದ ಪುತ್ರಿ ದಿತಿ ಸ್ಮರಣಾರ್ಥ ಪ್ರತೀ ವರ್ಷ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗ ಕೊಡಮಾಡುವ ದಿತಿ ಸಾಂತ್ವಾನ ನಿಧಿಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ ಜಾರಪ್ಪ ಪೂಜಾರಿ ಸ್ವಾಗತಿಸಿದರು. ಹೃಷಿಕೇಶ್ ಧರ್ಮಸ್ಥಳ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸಂಜೀವ ಎನ್.ಸಿ ವಂದಿಸಿದರು.
ಕೋವಿಡ್ ನಿಯಮಾವಳಿ ಅನುಸಾರ ಸಂಘದ ಎಲ್ಲಾ ಸದಸ್ಯರುಗಳು, ಮೀಡಿಯಾ ಕ್ಲಬ್ ಪ್ರಾಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಲೈವ್ ಮೀಡಿಯಾ ನ್ಯೂಸ್ ತಂಡದಿಂದ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಕೈಗೊಳ್ಳಲಾಗಿತ್ತು.