ಬೆಳ್ತಂಗಡಿ; ಕಳಿಯ ಗ್ರಾಮದ ಗೇರುಕಟ್ಟೆ ಮನ್ಶರ್ ವಿದ್ಯಾ ಸಂಸ್ಥೆಯ ಭಾಗವಾದ ಪ್ಯಾರಾಮೆಡಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ಸರಕಾರದ ಆದೇಶದಂತೆ ಕೋವಿಡ್ ನಿಂದ ರಕ್ಷಣೆಗಾಗಿ ವ್ಯಾಕ್ಸಿನ್ ಕಾರ್ಯಕ್ರಮ ಕಾಲೇಜು ಕ್ಯಾಂಪಸ್‌ನಲ್ಲಿ ಜರುಗಿತು.
ಶಿಬಿರದ ನೇತೃತ್ವವನ್ನು ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ದಾಳ ವಹಿಸಿದ್ದರು.
ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಮೋದ್, ಶುಶ್ರೂಷಕಿ, ಆಶಾ ಕಾರ್ಯಕರ್ತೆಯರು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ಯಾರ್ಥಿಗಳೂ ಮಾತ್ರವಲ್ಲದೆ ಸ್ಥಳೀಯ ಪರಿಸರವಾಸಿಗಳೂ ಇದರ ಪ್ರಯೋಜನ ಪಡೆದರು.
ವಿದ್ಯಾ ಸಂಸ್ಥೆಗೆ ಈ ಅವಕಾಶ ಒದಗಿಸಿಕೊಟ್ಟ ಶಾಸಕ ಹರೀಶ್ ಪೂಂಜ ಅವರಿಗೆ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಅವರು ಅಭಿನಂದನೆ ಸಲ್ಲಿಸಿದರು.