ಕಾಜೂರ್ ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷ ಜೆ.ಹೆಚ್ ಹಾರಿಸ್ ಕಾಜೂರ್ ಸೌದಿ ಅರೇಬಿಯಾ..
ಬೆಳ್ತಂಗಡಿ; ಉದ್ಯೋಗಕ್ಕಾಗಿ ವಿದೇಶೀ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಿರುವ ಅನಿವಾಸಿ ಭಾರತೀಯರು ಒಟ್ಟು ಸೇರಿ ಹುಟ್ಟೂರಿನ ಮೇಲಿನ ಪ್ರೀತಿಯಿಂದ ಇಲ್ಲಿನ ಜನರ ಸೇವೆ ಮಾಡಬೇಕೆಂಬ ಇರಾದೆಯಿಂದ ಕಾಜೂರು ಡೆವಲಪ್ಮೆಂಟ್ ಕಮಿಟಿ (ಕೆಡಿಸಿ) ಸೌದಿ ಅರೇಬಿಯಾ ಘಟಕ ಕೋವಿಡ್ ಸಂದರ್ಭ ಊರಿನವರಿಗಾಗಿ ಸಾರ್ಥಕ ಸೇವೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಡಿಸಿ ಕಳೆದ 8 ವರ್ಷಗಳಿಂದ ಕಾಜೂರು ಜಮಾಅತಿನ ಜನರ ಕೆಲವೊಂದು ನೋವು, ಸಂಕಷ್ಟಗಳಿಗೆ ನೆರವಾಗುವ ಮೂಲಕ ಸಹಕಾರ ಒದಗಿಸುತ್ತಾ ಬಂದಿದೆ.
2021-22 ನೇ ಸಾಲಿನ ಅಧ್ಯಕ್ಷ ಜೆ.ಹೆಚ್ ಹಾರಿಸ್ ಅಲ್ ಹಸ್ಸಾ ಸೌದಿ ಅರೇಬಿಯಾ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ತಂಡಕ್ಕೆ ಎಲ್ಲಾ ಸದಸ್ಯರೂ ಸಾಥ್ ನೀಡಿದ್ದಾರೆ.
ಸಂಘಟನೆಯು ಈ ಬಾರಿ ಜಮಾತಿನಲ್ಲಿ ಮರಣ ಹೊಂದಿದ 6 ಕುಟುಂಬಗಳಿಗೆ ಸಾಂತ್ವನ ಮೊತ್ತ ನೀಡಿದೆ.
ಜಮಾತಿನಲ್ಲಿ ನಡೆದ 2 ಮದುವೆ ಕಾರ್ಯಕ್ರಮಕ್ಕೆ ಧನ ಸಹಾಯ ಒದಗಿಸಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ಮುಹಮ್ಮದ್ ಅಲಿ ಅವರಿಗೆ ತಕ್ಷಣಕ್ಕೆ ಬೇಕಾದ ಔಷಧಿ, ಬೆಡ್ ಮತ್ತು ಆಹಾರ ಸಾಮಾಗ್ರಿಗಳ ವ್ಯವಸ್ಥೆಯನ್ನೂ ಸಕಾಲಿಕವಾಗಿ ಒದಗಿಸಿಕೊಟ್ಟಿದೆ.
ರಜಾ ನಿಮಿತ್ತ ಸ್ವದೇಶಕ್ಕೆ ತೆರಳಿ ಇಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸದಸ್ಯರ ಹಿತವನ್ನೂ ಈ ಸಂಘಟನೆ ಕಾಪಾಡಿದೆ.
ಇವರ ಈ ಪ್ರಾಮಾಣಿಕ ಕಳಕಳಿಯ ಕಾರ್ಯವನ್ನು ಕಾಜೂರು ಆಡಳಿತ ಸಮಿತಿ ಮತ್ತು ಎಲ್ಲಾ ಅಂಗಸಂಸ್ಥೆ ಗಳು ,ಸುನ್ನೀ ಸಂಘ ಕುಟುಂಬದ ಸಂಘಗಳು ಅಭಿನಂದಿಸಿವೆ.