Posts

ಸಹಕಾರಿ ಧುರೀಣ ಎನ್.ಎಸ್‌ ಗೋಖಲೆಯವರಿಗೆ ಮುಂಡಾಜೆಯಲ್ಲಿ ನುಡಿನಮನ


ಬೆಳ್ತಂಗಡಿ; ಇತ್ತೀಚಿಗೆ ಅಕಾಲಿಕವಾಗಿ ನಮ್ಮನಗಲಿದ ಸಹಕಾರಿ ಧುರೀಣ, ಧಾರ್ಮಿಕ ಮುಂದಾಳು,  ಸರ್ವಧರ್ಮೀಯರಲ್ಲೂ ಸಮಾನವಾಗಿ ಗೌರವದಿಂದ ವ್ಯವಹರಿಸುತ್ತಿದ್ದ ಎನ್.ಎಸ್ ಗೋಖಲೆಯವರಿಗೆ ಮುಂಡಾಜೆ ಸಹಕಾರಿ ಸಂಘ ಮತ್ತು ಊರಿನ ವಿವಿಧ ಸಂಘ ಸಂಸ್ಥೆಗಳ‌ ನೇತೃತ್ವದಲ್ಲಿ ನುಡಿನಮನ ಹಾಗು ಸಾರ್ವಜನಿಕ ಶ್ರದ್ದಾ೦ಜಲಿ ಕಾರ್ಯಕ್ರಮವು ಮು೦ಡಾಜೆ ಪರಶುರಾಮ ದೇವಳದ ಸಭಾಂಗಣದಲ್ಲಿ ಜರುಗಿತು.


ಅಡೂರು ವೆಂಕಟ್ರಾಯ , ಶ್ರೀಧರ ಜಿ ಭಿಡೆ, ಮುುುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಶ್ರೀಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ನಹಾವೀರ ಅಜ್ರಿ ಇವರು ಗೋಖಲೆ ಅವರ ಭಾವಚಿತ್ರಕ್ಕೆ ದೀಪ‌ಬೆಳಗಿ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮದಲ್ಲಿ ಭಾಗಿಯಾಗಿ,‌ ಸಹಕಾರಿ ಕ್ಷೇತ್ರದಲ್ಲಿ‌ ಎನ್. ಎಸ್ ಗೋಖಲೆಯವರು ದಿಗ್ಗಜರು ಎಂದರೆ ತಪ್ಪಲ್ಲ. ಆವರು ಈ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಯುವ ಜನತೆಗೆ ಪ್ರೇರಣೆಯಾಗುವ ದೃಷ್ಟಿಯಲ್ಲಿ ವಾರದೊಳಗೆ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಜೊತೆಗೆ ತನಗೆ ಅವರ ಜೊತೆ ಇದ್ದ ಒಡನಾಟ, ಅವರು ಸಹಕಾರಿ ಕ್ಷೇತ್ರಕ್ಕೆ ಮತ್ತು ತಾಲೂಕಿಗೆ ಬೆಳವಣಿಗೆಗೆ ನೀಡಿದ ಕೊಡುಗೆ ಸ್ಮರಿಸಿ ನಮನ ಸಮರ್ಪಿಸಿದರು.  


ಗಂಡಿಬಾಗಿಲು ಚರ್ಚ್‌ನ ಧರ್ಮಗುರುಗಳಾದ ಷಾಜಿ ಮ್ಯಾಥ್ಯೂ, ಮುಂಡಾಜೆ ಪರಶುರಾಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಜೆ  ವೆಂಕಟೇಶ ಭಟ್, ತಾ.ಪಂ ಮಾಜಿ ಸದಸ್ಯ ವಿ.ಟಿ‌ ಸೆಬಾಸ್ಟಿಯನ್, ಎನ್.ಎಸ್ ಗೋಖಲೆಯವರ ಪುತ್ರಿ ಮಾಯಾ ಮೊದಲಾದವರು, ಗ್ರಾ.ಪಂ ಅಧ್ಯಕ್ಷೆ ರಂಜಿನಿ ರವಿಕುಮಾರ್, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಮಚಾಲಕ ನಾಮದೇವ ರಾವ್, ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಎಂ, ಲೈವ್ ಮೀಡಿಯಾ ನ್ಯೂಸ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ, ಮಿಲ್ಕ್  ಸೊಸೈಟಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಬಾಬು ಪೂಜಾರಿ ಕೂಳೂರು, ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರರಾದ ಗೋಪಾಲಕೃಷ್ಣ ಇರ್ವತ್ರಾಯ, ಅನಂತ ರಾವ್ ಚಾರ್ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

 ಮುಂಡಾಜೆ‌ ಸಹಕಾರಿ ಸಂಘದ ಸಿಇಒ ನಾರಾಯಣ ಫಡ್ಕೆ  ನಿರೂಪಿಸಿದರು.

ಕಾರ್ಯಕ್ರಮದಲ್ಲಿ‌ ಹಲವು ಮಂದಿ‌‌ ವಿವಿಧ ಕ್ಷೇತ್ರಗಳ ಮುಖ್ಯಸ್ಥರು ನುಡಿನಮನ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official