ಬೆಳ್ತಂಗಡಿ; ಬೆರ್ಕಳದ ಸಮಾನಮನಸ್ಕ ಯುವಕರ ತಂಡವೊಂದು ಬೆರ್ಕಳದಿಂದ ಮಡಂತಡೆವರೆಗೆ ಡಾಂಬಾರು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕಳೆ ಕೀಳುವ ಮಾದರಿ ಶ್ರಮಾದಾನ ಸೋಮವಾರ ನಡೆಸಿದೆ.
ಯುವಕರ ತಂಡ ನಡೆಸಿದ ಈ ಶ್ರಮಾದಾನವನ್ನು ಮೆಚ್ಚಿ ಅನೇಕ ಮಂದಿ ದಾನಿಗಳು, ಪರಿಸರ ವಾಸಿಗಲು ಸ್ವಯಂಪ್ರೇರಿತ ರಾಗಿ ತಂಡಕ್ಕೆ ಆರ್ಥಿಕ ಸಹಕಾರ ನೀಡಿದ್ದರು. ಸದ್ರಿ ಸಂಗ್ರಹವಾದ ಒಟ್ಟು ಮೊತ್ತ 6 ಸಾವಿರ ರೂಪಾಯಿಗಳನ್ನು ಒಟ್ಟುಗೂಡಿಸಿದ ತಂಡ ಅದರಲ್ಲಿ ಅಕ್ಕಿ ಖರೀದಿಸಿ, 32 ಕುಟುಂಬಗಳಿಗೆ ತಲಾ 5 ಕೆ.ಜಿ ಯಂತೆ ನೀಡುವ ಮೂಲಕ ಮಾದರಿಯಾಗಿದೆ.
ಶ್ರಮಾದಾನದಲ್ಲಿ ಸತೀಶ್ ಆಚಾರ್ಯ, ವಿಘ್ನೇಶ್ ಆಚಾರ್ಯ, ಪ್ರಶಾಂತ್, ಸಂತೋಷ್ ನಾಯಕ್, ಗಣೇಶ್ ಎಂ, ರೋಹಿನಾಥ, ಶೋಧನ್, ಸಂಪತ್, ರಾಜೇಶ್ ಆಚಾರ್ಯ, ಚಂದ್ರಶೇಖರ್, ರೋಹಿತ್ ಮತ್ತು ಪ್ರಜ್ವಲ್ ಮೊದಲಾದವರು ಬಾಗಿಯಾಗಿದ್ದಾರೆ.ಇದೂ ಮಾತ್ರವಲ್ಲದೆ ಈ ಯುವಕರ ತಂಡ ಈ ಪರಿಸರದಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಅನೇಕ ಮಂದಿಗೆ ನೆರವಾಗುತ್ತಿದ್ದು, ಸಮಾಜದ ಎಲ್ಲಾ ವರ್ಗದ ಜನರ ನಡುವೆ ಹೊಂದಾಣಿಕೆಯಿಂದ ಮುನ್ನಡೆಯುತ್ತಿದ್ದಾರೆ.