Posts

ಉಜಿರೆ ಬಾಲಕನ ಅಪಹರಣ ಇಂದು ಇನ್ನಿಬ್ಬರ ಬಂಧನ ಸಾಧ್ಯತೆ!?.

1 min read

ಬೆಳ್ತಂಗಡಿ; ಉಜಿರೆಯ ಉದ್ಯಮಿ‌ ಬಿಜೊಯ್ ಅವರ ಪುತ್ರ ಅನುಭವ್ ಅಪಹರಣ ಪ್ರಕರಣದಲ್ಲಿ ಮೊದಲ‌ ಹಂತದಲ್ಲಿ ಬಂಧಿತರಾಗಿರುವ 6 ಮಂದಿ ಆರೋಪಿಗಳು ಪೊಲೀಸ್ ಕಷ್ಟಡಿಯಲ್ಲಿದ್ದು, ಇಂದು (ಮಂಗಳವಾರ) ಇನ್ನಿಬ್ಬರು ಆರೋಪಿಗಳನ್ನು ಪೊಲೀಸ್ ಇಲಾಖೆ ಬಂಧಿಸಲಿದೆ ಎಂಬ ಸುಳಿವು ಲಭಿಸಿದೆ.

ಕೊಕ್ಕಡ ಬಳಿಯ ಕೌಕ್ರಾಡಿ ಎಂಬಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದ್ದ ಎಸ್.ಪಿ ಲಕ್ಷ್ಮೀ ಪ್ರಸಾದ್ ಅವರು ಮಾಹಿತಿ ನೀಡುವ ವೇಳೆ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ್ದಾರೆ.

ಈಗಾಗಲೇ ಬಂಧಿತರಿಂದ  ಕಸ್ಟಡಿಯಲ್ಲಿ ಅನೇಕ ಮಾಹಿತಿಗಳನ್ನು ಕಲೆಹಾಕಲಾಗಿದೆ‌. ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಆರೋಪಿಗೆ ಬಲೆಬೀಸಲಾಗಿದೆ. ಈ‌ ಮಧ್ಯೆ ಅಪಹರಣ ಪ್ರಕರಣದಲ್ಲಿ ನೇರ ಶಾಮೀಲಾಗಿರುವ ಇನ್ನಿಬ್ಬರನ್ನು ಬಂಧಿಸಲಿದ್ದೇವೆ. ಒಂದೆರಡು ದಿನಗಳಲ್ಲಿ ಪ್ರಧಾನ ಆರೋಪಿಯನ್ನು ಬಂಧಿಸಿದ ಮೇಲೆ ತನಿಖೆಗೆ ಇನ್ನಷ್ಟು ವೇಗ ಸಿಗಲಿದೆ ಎಂದರು.


ಹಣ ವಸೂಲಾತಿಗೆ ಬೇಕಾಗಿ ಈ ಅಪಹರಣ;

ಬಾಲಕನ‌ ತಂದೆ ದೊಡ್ಡ ಮೊತ್ತದ ಹಣ ನೀಡಲು ಬಾಕಿ ಇರಿಸಿಕೊಂಡಿದ್ದೇ ಬಾಲಕನ ಅಪಹರಣಕ್ಕೆ ಕಾರಣ ಎಂಬುದು ದಿನದಿಂದ ದಿನಕ್ಕೆ ಖಚಿತವಾಗುತ್ತಿದೆ. ಇದೇ ಸಂದೇಹದ ಮೇಲೆ ಪೊಲೀಸರು ಬಾಲಕನ ತಂದೆಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕನನ್ನು ಅಪಹರಿಸಲು ಸುಪಾರಿ ನೀಡಿದ ವ್ಯಕ್ತಿಗೆ 1.53/ಕೋಟಿ ರೂ. ನೀಡಲು ಇತ್ತು ಎಂಬ ಬಗ್ಗೆ ಬಲವಾದ ಮಾತು ಕೇಳಿಬಂದಿದೆ. ಇನ್ನೊಂದು ಮೂಲಗಳ ಪ್ರಕಾರ ಎರಡೂವರೆ ಕೋಟಿಗೂ ಅಧಿಕ ವ್ಯವಹಾರದ ವಿಚಾರ ಇದರಲ್ಲಿ ಅಡಕವಾಗಿ ಎನ್ನಲಾಗಿದೆ. 

ಎಫ್.ಐ.ಆರ್ ಸಾಧ್ಯತೆ;

ಪ್ರಕರಣದ ಪ್ರಮುಖ ಆರೋಪಿ ಬಂಧನವಾದ ಬಳಿಕ ಇಡೀ ವಿಚಾರ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಬಾಲಕನ ತಂದೆಯ ವಿರುದ್ಧವೇ ಎಫ್.ಐ.ಆರ್ ದಾಖಲಾಗುವ ಸಾಧ್ಯತೆ ಧಟ್ಟವಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment