Posts

ಜುಲೈ 21 ಬುಧವಾರದಂದು ಬಕ್ರೀದ್ ಹಬ್ಬ ; ಖಾಝಿಗಳ ತೀರ್ಮಾನ

1 min read


ಬೆಳ್ತಂಗಡಿ: ಜು‌. 21ರ ಬುಧವಾರ ಈದುಲ್ ಅಝ್ಹಾ (ಬಲಿ ಪೆರುನಾಳ್) ಬಕ್ರೀದ್ ಹಬ್ಬ ಆಚರಿಸಲು ಖಾಝಿಗಳು ತೀರ್ಮಾನ ಪ್ರಕಟಿಸಿದ್ದಾರೆ.

ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಕೂರತ್ ತಂಙಳ್, ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ,ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಇವರುಗಳು ಕರೆ ನೀಡಿದ್ದಾರೆ.

ಜು. 10 ರಂದು ಚಂದ್ರದರ್ಶನ ಆಗದೇ ಇರೂದರಿಂದ ಮುಂದಿನ 

ಜು.20ರಂದು ದುಲ್ ಹಜ್ಜ್ ತಿಂಗಳ 10 ಎಂದು ಪರಿಗಣಿಸಿ ವಿದ್ವಾಂಸ ಮಂಡಳಿ ಅಂತಿಮ ತೀರ್ಮಾನ ಕೈಗೊಂಡಿದೆ. ಆದುದರಿಂದ ಜು.20 ಅರಫಾ ದಿವಸವಾಗಿದೆ. ಅಂದು ಉಪವಾಸ ವೃತಾಚರಣೆ ಇದೆ ಎಂದು ಪ್ರಕಟಿಸಲಾಗಿದೆ.

ಹಬ್ಬದ ನೆಪದಲ್ಲಿ ಕೋವಿಡ್ ನಿಯಮಾವಳಿ ಮೈ ಮರೆಯದಂತೆ ಎಚ್ಚರಿಕೆ;

ಹಬ್ಬದ ಜೊತೆಗೆ ಸರಕಾರದ ಸಾಂಕ್ರಾಮಿಕ ತಡೆ ಕಾಯ್ದೆ ಕೋವಿಡ್ ನಿಯಮಾವಳಿಗಳನ್ನು ಯಾರೂ ಗಾಳಿಗೆ ತೂರದಂತೆಯೂ ಖಾಝಿಗಳು ಎಚ್ಚರಿಕೆ ನೀಡಿದ್ದಾರೆ.

ವಸ್ತ್ರ ಖರೀದಿ ಇತ್ಯಾದಿ ನೆಪದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಮಸೀದಿ ಮೊಹಲ್ಲಾಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದನ್ನು ಮರೆಯಬೇಡಿ, ಮಾಸ್ಕ್ ಸೇನಿಟೈಸರ್ ಬಳಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಂದೇಶ ರವಾನಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment