Posts

ಬಿ.ಕೆ ಇಸ್ಮಾಯಿಲ್ ಹಾಜಿ(ಬಳ್ಳಾರಿ) ಕೃಷ್ಣಾಪುರ ಕಾಟಿಪಳ್ಳ ಅವರ ಮನೆಗೆ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ ನಿಯೋಗ ಸಾಂತ್ವಾನ ಭೇಟಿ: ದುಆ ಸಮರ್ಪಣೆ

1 min read

ಮಂಗಳೂರು; ಇತ್ತೀಚಿಗೆ ನಿಧನರಾದ ಬೈಕಂಪಾಡಿ ಅಂಗರಗುಂಡಿ ನಿವಾಸಿಯಾಗಿದ್ದ ಮಾಮು ಬ್ಯಾರಿಯವರ ಪುತ್ರ, ಹಿರಿಯ ಕಾಂಗ್ರೆಸ್ ಮುಖಂಡ ,ಕೊಡುಗೈ ದಾನಿ ಹಾಗೂ, ಕ್ಲಾಸ್ ಒನ್ ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದ ಕಾಟಿಪಳ್ಳ ಏರಡನೇ ಬ್ಲಾಕ್ ನಿವಾಸಿ ಬಿ.ಕೆ.ಇಸ್ಮಾಯಿಲ್ ಹಾಜಿ (ಬಳ್ಳಾರಿ )ಯವರ ಮನೆಗೆ ಕರ್ನಾಟಕ ವಖ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಎಂ. ಶಾಫಿ ಸ‌ಅದಿಯವರ ನಿಯೋಗ ಸಾಂತ್ವಾನ  ಭೇಟಿ ನೀಡಿತು. ಈ ವೇಳೆ

ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದ ವಕ್ಫ್ ರಾಜ್ಯಾಧ್ಯಕ್ಷರು, ಮೃತರ ಪಾರತ್ರಿಕ ವಿಜಯ ಮತ್ತು ಮಘ್ಫಿರತ್‌ಗಾಗಿ ಪ್ರಾರ್ಥಿಸಿದರು.

ಈ ಸಂಧರ್ಭದಲ್ಲಿ ದ.ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ. ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ.ಕ ಜಿಲ್ಲಾ ವಖ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರೂ, ಪ್ರತಿಷ್ಠಿತ ಕಾಜೂರು ದರ್ಗಾ ಶರೀಫ್ ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕರ್ ಸಿದ್ದೀಕ್ ಕಾಜೂರು,  ಕಾಟಿಪಳ್ಳ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಜನಾಬ್ ಸಲೀಂ ರಫಿ, ರಾಜ್ಯ ವಖ್ಫ್ ಮಂಡಳಿ ACO ಬಿ.ಎ.ಖಾದರ್ ಶಾ, ನ್ಯಾಯವಾದಿ ಮುಕ್ತಾರ್ ಅಹ್ಮದ್, ವಖ್ಫ್ ಸದಸ್ಯರಾದ ಬಿ.ಕೆ. ಸಿರಾಜುದ್ದೀನ್, ಹಾರಿಸ್ ಬೈಕಂಪಾಡಿ, ಹಿದಾಯತ್ ಇವರುಗಳು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment