ಬೆಳ್ತಂಗಡಿ: ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಕಿಲ್ಲೂರಿನ ಯುವಕರ ಸಮಿತಿಯಾದ "ಜಿಸಿಸಿ ಬಾಯ್ಸ್ ಕಿಲ್ಲೂರು" ಇದರ ಮಹಾಸಭೆಯು ಉಮರ್‌ಕುಂಞಿ ಅಂಬ್ರೋಳಿ ಅಧ್ಯಕ್ಷತೆಯಲ್ಲಿ ಆನ್ಲೈನ್‌ನಲ್ಲಿ ನಡೆಯಿತು.
ಸ್ವಾದಿಕ್ ಸಖಾಫಿ ಕಿಲ್ಲೂರು ದುವಾ ನಡೆಸಿದರು. ಅಝೀಝ್ ಝುಹ್ರಿ ಕಿಲ್ಲೂರು ಉದ್ಘಾಟಿಸಿದರು. ಬದುರುದ್ದೀನ್ ಕಿಲ್ಲೂರು ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಮಿತಿಯ ಹಿರಿಯ ಸಲಹೆಗಾರ ಮುಹಮ್ಮದ್ ಕಿಲ್ಲೂರು (ಕುಂಞಮೋನಾಕ ದರ್ಕಾಸ್) ನೇತೃತ್ವ ನೀಡಿದರು.
ನೂತನ ಸಮಿತಿಯಲ್ಲಿ ಸಲಹೆಗಾರರಾಗಿ ಮುಹಮ್ಮದ್ ಬಹ್ರೈನ್, ಅಝೀಝ್ ಝುಹ್ರಿ ಕಿಲ್ಲೂರು, ಅಧ್ಯಕ್ಷರಾಗಿ ಉಮರ್ ಅಂಬ್ರೋಳಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಕಿಲ್ಲೂರು (ಕುಂಞಮೋನಾಕ), ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕಿಲ್ಲೂರು, ಜೊತೆ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ (ಅತ್ತ), ಮುನೀರ್ ಕಿಲ್ಲೂರು, ಕೋಶಾಧಿಕಾರಿಯಾಗಿ ಬದುರುದ್ದೀನ್ ಕಿಲ್ಲೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಅಂಬ್ರೋಳಿ, ಅಝೀಝ್ ಸಲ್ಮ, ಅಝೀಝ್ ಮಲ್ಲಿಗೆ, ಹನೀಫ್ ಕಿಲ್ಲೂರು, ಸಲಾಹುದ್ದೀನ್ ಕಿಲ್ಲೂರು, ನಝೀರ್ ಕುರುಬರಗುಡ್ಡೆ, ಅಬ್ದುಲ್ ರಹ್ಮಾನ್ ಕೋಯನಗರ, ಹಾರಿಸ್ ಕೆ.ಪಿ, ಮುಹಮ್ಮದ್ ಮಸ್ಕತ್, ಹಾರಿಸ್ ಬೆದ್ರಬೆಟ್ಟು, ಬಾತಿಷ ಕೋಯನಗರ, ಕಬೀರ್ ಮಲ್ಲಿಗೆ, ರಫೀಕ್ ಎರ್ಮಾಳ, ನೌಫಲ್ ಕೆಪಿ, ಇಮ್ರಾನ್ ಗುತ್ತಿಗೆಬೆಟ್ಟು, ಶಾರೂಕ್ ಕಿಲ್ಲೂರು ಅವರನ್ನು ಆಯ್ಕೆ ಮಾಡಲಾಯಿತು.
ಅಶ್ರಫ್ ಕಿಲ್ಲೂರು ಕಾರ್ಯಕ್ರಮ ಸಂಯೋಜಿಸಿದರು.