ಬೆಳ್ತಂಗಡಿ; 2023 ರ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಲು ಕೆಪಿಸಿಸಿ ಗೆ ಮೂರು ಮಂದಿ ಉಮೇದ್ವಾರಿಕೆ ಸಲ್ಲಿಸಿದ್ದು ಆ ಮೂಲಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅರ್ಜಿ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಚಿವ ಕೆ ಗಂಗಾಧರ ಗೌಡ ಅವರು, "ಬೆಳ್ತಂಗಡಿ ಅನಾಥ ಕ್ಷೇತ್ರ ವಲ್ಲ. ಇಲ್ಲಿ ಹೊರಗಿನವರನ್ನು ತಂದು ಸ್ಥಾಪನೆ ಮಾಡುವ ಅಗತ್ಯ ಇಲ್ಲ" ಎಂದಿರುವುದು ಇದೀಗ ಭಾರೀ ಸುದ್ದಿಯಾಗತೊಡಗಿದೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ನಿಯೋಗ;ಮುಂದುವರಿದು ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಿಂದ ಪಕ್ಷಕ್ಕಾಗಿ ನಮ್ಮ ಕಾರ್ಯಕರ್ತರು ದುಡಿದಿದ್ದಾರೆ. ನಮ್ಮ ವಸಂತ ಬಂಗೇರರು ದುಡಿದಿದ್ದಾರೆ. ನಾನೂ ದುಡಿದಿದ್ದೇನೆ. ಅಂತಹಾ ಸಂದರ್ಭದಲ್ಲಿ ಹೊರಗಡೆ ಯವರನ್ನು, ಬೆಂಗಳೂರಿನವನ್ನು ತಂದು ಸ್ಥಾಪನೆ ಮಾಡುವಂತಹಾ ಪರಿಸ್ಥಿತಿ ಯಾಕೆ ಬೇಕು?
ಯಾಕೆ ಅಗತ್ಯ ಇದೆ? ಎಂದು ಪ್ರಶ್ನಿಸಿದ ಅವರು, ಬೇಕಾದರೆ ಅವರಿಗೆ ಬೆಂಗಳೂರಿನಲ್ಲಿ ಬೇಕಾದಷ್ಟು ಕ್ಷೇತ್ರಗಳಿವೆ. ಅಲ್ಲಿ ಸ್ಪರ್ಧೆ ಮಾಡಬಹುದು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ಹಾಕುವಂತಹದ್ದು ಯಾಕೆ, ಅದಕ್ಕೆ ಯಾರೂ ಒಪ್ಪಲ್ಲ. ಅದು ಸ್ಪಷ್ಟವಾಗಿ ದೆ. ಒಂದೋ ವಸಂತ ಬಂಗೇರ ಸ್ಪರ್ಧೆ ಮಾಡ್ತಾರೆ. ಅಥವಾ ನಾನೇ ಸ್ಪರ್ಧೆ ಮಾಡುತ್ತೇನೆ. ಹೊರಗಿನವರಿಗೆ ಟಿಕೆಟ್ ಎಂಬ ಪ್ರಶ್ನೆನೇ ಬರೋಲ್ಲ.
ರಾಜ್ಯದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅದಕ್ಕೆ ಅವಕಾಶ ಮಾಡಿಕೊಡಲ್ಲ.
ನಮ್ಮಲ್ಲಿ ತೀರ್ಮಾತಾಗಿದೆ. ಹರೀಶ್ ಕುಮಾರ್ ಅವರು, ಪಕ್ಷದ ಅಧ್ಯಕ್ಷರು, ಮುಂಚೂಣಿ ಘಟಕದ ನಾಯಕರುಗಳು, ಮಹಿಳಾ ಘಟಕದ ನಾಯಕರು, ಎಲ್ಲರೂ ಒಂದು ಅಭಿಪ್ರಾಯಕ್ಕೆ ಬಂದಿದ್ದೇವೆ. ಇವತ್ತು ಎಲ್ಲರೂ ಇಲ್ಲೇ ಇದ್ದಾರೆ. ಅದ್ದರಿಂದ ಬೆಳ್ತಂಗಡಿ ಅನಾಥ ಕ್ಷೇತ್ರವಲ್ಲ. ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಏನೂ ಕೊರತೆ ಇಲ್ಲ. ಕೆಲವೊಂದು ಕಾರಣದಿಂದ ಏನೋ ಆಗಿರಬಹುದು. ನಾನು ಪಕ್ಷ ಬಿಡುವಂತಹಾ ಪ್ರಶ್ನೆ ಬಂದಿರಬಹುದು. ಅದು ಈಗ ಅಗತ್ಯ ಇಲ್ಲ. ಅದನ್ನು ನಾನು ಈಗ ವಿವರಿಸಲು ಹೋಗೂದಿಲ್ಲ ಎಂದಿದ್ದಾರೆ.
ಈ ಮಧ್ಯೆ ಟಿಕೆಟ್ ಆಕಾಂಕ್ಷಿಯಾಗಿರುವ ಕೆಪಿಸಿಸಿ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ತಾನು ಉಮೇದ್ವಾರಿಕೆ ಸಲ್ಲಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಿತ್ ಶಿವರಾಂ ಪೋಸ್ಟ್;"ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಕೆಪಿಸಿಸಿ ಸಮಿತಿಗೆ ನಾನು ಅರ್ಜಿ ಸಲ್ಲಿಸಿದ್ದೇನೆ. ಹಿಂದಿನಿಂದ ಬೆನ್ನು ತಟ್ಟುವ ಹಿರಿಯರು, ಬೆಂಬಲವಾಗಿ ನಿಲ್ಲುವ ಕಾರ್ಯಕರ್ತರು, ಹಿತೈಷಿಗಳಿಗೆ ನಾನು ಋಣಿಯಾಗಿದ್ದೇನೆ.
ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಹಾಗೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಎಂದಿನಂತೆ ನಿಮ್ಮೆಲ್ಲರ ಸಲಹೆ, ಸಹಕಾರ ಪ್ರೀತಿ,ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಒಟ್ಟಾರೆ ಬೆಳವಣಿಗೆಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ಹಿರಿಯ ತಲೆಗಳ ಮಧ್ಯೆ ಹೊಸ ಅಭ್ಯರ್ಥಿ ಕೂಡ ಇದ್ದಾರೆ ಎಂಬುದೀಗ ಸಾಬೀತಾಗಿದೆ.
----
ವರದಿ; ಅಚ್ಚು ಮುಂಡಾಜೆ