ಬೆಳ್ತಂಗಡಿ: ಮಾಜಿ ಸೈನಿಕರು ಹಾಗೂ ಕರ್ನಾಟಕ ವಕ್ಫ್ ಮಂಡಳಿಯ ಐದು ಸಂಸ್ಥೆಗಳಲ್ಲಿ ನಿಯೋಜಿತ ಆಡಳಿತಾಧಿಕಾರಿಯೂ ಆಗಿರುವ ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಪ್ರಧಾನ ಕಾರ್ಯದರ್ಶಿ
ಮುಹಮ್ಮದ್ ರಫಿ ಮತ್ತು ಬಿ .ಬಿ ಹಾಜಿರಾ ದಂಪತಿ ಪುತ್ರಿ, ಮರ್ಹೂಮ್ ಬಿ. ಎ ಜಬ್ಬಾರ್ ಸಾಹೇಬ್ ಮತ್ತು ಅಮೀನಾಬಿ ಇವರ ಮೊಮ್ಮಗಳು ಸೀಮಾ ಇವರ ವಿವಾಹ ನಿಶ್ಚಿತಾರ್ಥವು ಅರಸೀಕೆರೆ ಬಿ.ಎ ಲತೀಫ್ ಮತ್ತು ಸಮೀನಾ ದಂಪತಿ ಪುತ್ರ ಮುಹಮ್ಮದ್ ಇದ್ರೀಸ್ ಇವರೊಂದಿಗೆ ರಫಿ ಅವರ ಸ್ವಗ್ರಹದಲ್ಲಿ ನಡೆದಿದ್ದು ಈ ಸಮಾರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನಾ ಎನ್.ಕೆ.ಎಮ್ ಶಾಫಿ ಸಅದಿ ಭಾಗವಹಿಸಿ ಶುಭ ಕೋರಿದರು.
ಅವರ ಜೊತೆ ಕಾಜೂರ ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಲಹಾ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಅವರು ಭಾಗವಹಿಸಿದ್ದರು.
.