Posts

ಮಾ. 26-27: ನೆರಿಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ, ಬೃಹತ್ ಬುರ್ದಾ ಮಜ್ಲಿಸ್, ಬಾಯಾರ್ ತಂಙಳ್ ನೆರಿಯಕ್ಕೆ

1 min read

 


ಬೆಳ್ತಂಗಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ನೆರಿಯ, ಸುನ್ನೀ ಯುವನ ಸಂಘ (ಎಸ್‌ವೈಎಸ್), ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ವತಿಯಿಂದ ಮಾ. 26 ಮತ್ತು 27 ರಂದು ತಾಜುಲ್ ಉಲಮಾ ಹಾಗೂ ಅಗಲಿದ ನಾಯಕರ ಅನುಸ್ಮರಣೆ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಸಂಪನ್ನಗೊಳ್ಳಲಿದೆ.

ಮಾ. 26 ರಂದು ಮಸ್‌ಊದ್ ಸಅದಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ನೆರಿಯ ಖತೀಬ್ ಮುಹಮ್ಮದ್ ಶರ್ವಾನಿ ರಝ್ವಿ ಉದ್ಘಾಟನೆ ನಡೆಸಲಿದ್ದಾರೆ. ನೆರಿಯ ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಬಲಿಪಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯಿದ್ ಎಪಿಎಸ್ ಹುಸೈನ್ ಆಟಕೋಯ ತಂಙಳ್ ಅಲ್ ಅಹ್ದಲ್ ಉಪ್ಪಳ್ಳಿ ದುಆ ಆಶೀರ್ವಚನ ನೀಡಲಿದ್ದಾರೆ. ವಾಗ್ಮಿ ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ. ಮಾ. 27 ರಂದು ಸಯ್ಯಿದ್ ಬಾಯಾರ್ ತಂಙಳ್ ಆಗಮಿಸಲಿದ್ದು ದುಆ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಮುಖ್ಯ ಪ್ರಭಾಷಣವನ್ನು ನೆರಿಯ ಜಮಾಅತ್ ಖತೀಬ್ ಹಾಗೂ ಉದಯೋನ್ಮುಖ ಯುವ ವಾಗ್ಮಿ ಮುಹಮ್ಮದ್ ಶರ್ವಾನಿ ರಝ್ವಿ ನಡೆಸಿಕೊಡಲಿದ್ದಾರೆ. ಸಮಾರಂಭದಲ್ಲಿ ಅಶ್ರಫ್ ಮದನಿ ಕಳೆಂಜಿಬೈಲು, ರಫೀಕ್ ಮದನಿ ಕಕ್ಕಿಂಜೆ, ಹಾರಿಸ್ ಸಖಾಫಿ, ಅಬೂಬಕ್ಕರ್ ಮುಸ್ಲಿಯಾರ್, ಅಬ್ದರ‍್ರಹ್ಮಾನ್ ಝಹುರಿ ಬದಿಯಡ್ಕ, ಹಾರಿಸ್ ಸಅದಿ, ಹನೀಫ್ ಸಅದಿ ಸಹಿತ ಹಲವು ಧರ್ಮಗುರುಗಳು, ಸುನ್ನೀ ಸಂಘಕುಟುಂಬದ ನಾಯಕರುಗಳು, ವಿವಿಧ ಜಮಾಅತ್‌ಗಳ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪ್ರಮುಖ ಉಮರಾ ನಾಯಕರುಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಕೊನೆಯ ದಿನ ಅನ್ನದಾನ ಕೂಡ ನಡೆಯಲಿದೆ. ಕೋವಿಡ್ ನಿಯಮಾವಳಿ ಪಾಲಿಸಿಯೇ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಕರು ಲೈವ್ ಮೀಡಿಯಾ ನ್ಯೂಸ್‌ಗೆ ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment