Posts

ವಕ್ಫ್ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ ಅಧಿಕಾರಕ್ಕೆ ಯಶಸ್ವಿ ಒಂದು ವರುಷ; ಗಣ್ಯಾತಿ ಗಣ್ಯರಿಂದ ಅಭಿನಂದನೆ || ಕಾಜೂರು ಅಭಿವೃದ್ಧಿಗೆ ಕೋಟಿ ಗೂ ಅಧಿಕ ಅನುದಾನ ಒದಗಿಸಿದ ಮೌಲಾನಾ

1 min read

ಕಾಜೂರು ಕ್ಷೇತ್ರದಿಂದ ಅಭಿನಂದನೆ

ಗೊಂದಲದ ಗೂಡಾಗಿದ್ದ ವಕ್ಫ್ ಇಲಾಖೆಯನ್ನು ಸಮುದಾಯದ ಸರ್ವರಿಗೂ ಮುಕ್ತ ಸಂಸ್ಥೆಯಾಗಿ ಮೂಡಿಬರುವಂತೆ ಪರಿವರ್ತನೆ ಮಾಡಿ, ತೆರೆಯ ಮರೆಯಲ್ಲಿ ಇದ್ದ ವಕ್ಫ್ ಇಲಾಖೆಯನ್ನು ಮುಖ್ಯ ವಾಹಿನಿಗೆ ತಂದು ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಖ್ಯಾತಿ ಒರ್ವ ಸುನ್ನೀ  ಧಾರ್ಮಿಕ ಪಂಡಿತ ಮೌಲಾನಾ ಎನ್.ಕೆ.ಎಮ್  ಶಾಫಿ ಸ‌ಅದಿ ಅವರು ಅಧಿಕಾರ ವಹಿಸಿಕೊಂಡು ನ.18 ಕ್ಕೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. 

ಆ ನಿಟ್ಟಿನಲ್ಲಿ ರಾಜ್ಯಾಧ್ಯಂತದಿಂದ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.

ಸಂಘಟನಾ ಚತುರರೂ, ವಾಗ್ಮಿಗಳೂ ಆಗಿರುವ ಶಾಫಿ ಸ‌ಅದಿ ಅವರು ಅಧಿಕಾರ ವಹಿಸಿಕೊಂಡಂದಿನಿಂದ ರಾತ್ರಿ ಹಗಲೆನ್ನದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನದ 18 ಗಂಟೆ ಕಾರ್ಯತತ್ಪರರಾಗಿದ್ದಾರೆ‌.‌

ಅವರ ಈ ಅಲ್ಪ ಅವಧಿಯ ಆಡಳಿತದಲ್ಲೇ, ನೂರಾರು ಎಕ್ರೆ ಪ್ರದೇಶಗಳು ವಕ್ಫ್ ಆಸ್ತಿ ಒತ್ತುವರಿ ಆದದ್ದೆಲ್ಲವೂ ತೆರವುಗೊಳಿಸಲಾಗಿದೆ.

ವಕ್ಫ್ ಮುಂದಿದ್ದ ನೂರಾರು ವ್ಯಾಜ್ಯಗಳು ವಕ್ಫ್ ಇಲಾಖೆ ನೇರವಾಗಿ ಭಾಗಿಯಾಗಿ ಸುಖಾಂತ್ಯ ಗೊಳಿಸಿದೆ. ಕಾನೂನು ಹೋರಾಟಗಳು ಸಕ್ರಿಯತೆ ಪಡೆದುಕೊಂಡಿದೆ. ನೂರಾರು ಮೊಹಲ್ಲಾಗಳ ಆಡಳಿತಾತ್ಮಕ ಸಮಸ್ಯೆಗಳು ಪರಿಹಾರ ಕಂಡಿದೆ. ವಕ್ಫ್ ಎಂಬ ಸಂಸ್ಥೆಯನ್ನು ಜನರ ಮನಸ್ಸಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ವಕ್ಫ್ ಸ್ಥಳಗಳಲ್ಲಿ ಪ್ರಾರಂಭಿಸಲು ಆರ್ಥಿಕ ಶಕ್ತಿ ನೀಡಿದ್ದಾರೆ. ವಕ್ಫ್ ಆಸ್ತಿಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರದಿಂದ ಹಣ ಒದಗಿಸಿ ಕೊಟ್ಟಿದ್ದಾರೆ. ಈದ್ಗಾ ಮೈದಾನದ ಸಮಸ್ಯೆಯಲ್ಲಿ ಐತಿಹಾಸಿಕ ಜಯ ಕಾಣುವಲ್ಲಿ ಕಾರಣರಾಗಿದ್ದಾರೆ.

ಅಪಹಾಸ್ಯ ಮಾಡಿದವರು, ನಿಂದಿಸಿದವರು, ಕಾಲೆಳೆದವರ ಮಧ್ಯೆ ಕೇವಲ ಒಂದು ವರ್ಷದಲ್ಲೇ  ತಮ್ಮ ಅಧ್ಯಕ್ಷಗಿರಿಯಲ್ಲಿ ಶಾಫಿ ಸಅದಿ ಅವರ ಹೆಸರು ಮಾಧ್ಯಮಗಳೂ, ಪತ್ರಿಕೆಗಳಲ್ಲಿ ನಿರಂತರ ಮಾರ್ದನಿಸುವ ಮೂಲಕ ತಮ್ಮ ಕಾರ್ಯಶೈಲಿಯ ಮೂಲಕ ಉತ್ತರ ನೀಡಿದ್ದಾರೆ.

ರಾಜ್ಯದ ಮುಸ್ಲಿಮರ ಶತಮಾನದ ಕನಸು IAS, IPS ಸಮೇತ ಇರುವ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ (ತರಬೇತಿ ಕೇಂದ್ರ ) ನನಸಾಗಿಸುವಲ್ಲಿ ಯಶಸ್ವಿಯಾದ ಅಧ್ಯಕ್ಷರು, ವಕ್ಫ್ ಆಸ್ತಿಗಳಲ್ಲಿ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಕಬಳಿಕೆಯಾದ ನೂರಾರು ಎಕರೆ ವಕ್ಫ್ ಆಸ್ತಿಗಳನ್ನು ಮರಳಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಧೀರತೆ ತೋರಿದ್ದಾರೆ.

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಲ್ಲೂ ಕಾರಣರಾಗಿದ್ದಾರೆ.

ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ದಿ ಪಡೆದಿರುವ ಐತಿಹಾಸಿಕ  ಸರ್ವಧರ್ಮೀಯರ ಧಾರ್ಮಿಕ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ಇಲ್ಲಿಯ ಅಭಿವೃದ್ಧಿಗೆ ಒಂದೂವರೆ ಕೋಟಿಗೂ ಮಿಕ್ಕಿದ ಅನುದಾನ ಒದಗಿಸಿಕೊಡುವ ಮೂಲಕ ಮಾತು ತಪ್ಪದೆ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ‌. ಅವರ ಅಧಿಕಾರ ಅವಧಿ ಇನ್ನೂ ಮುಂದುವರಿಯುತ್ತಿದ್ದು ಉಳಿಕೆ ವರ್ಷದಲ್ಲಿ ಇನ್ನಷ್ಟು ಕಾರ್ಯಗಳು ಅವರಿಂದ ನಾಡಿಗೆ ಸಮರ್ಪಿತವಾಗಲಿ ಎಂದು‌ ಕಾಜೂರು ದರ್ಗಾ ಶರೀಫ್ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ‌.ಹೆಚ್ ಅಬೂಬಕ್ಕರ್ ಸಿದ್ದೀಕ್‌ ಕಾಜೂರು ಹಾಗೂ ಸರ್ವ ಜಮಾಅತ್ ಬಾಂಧವರು ಶುಭ ಹಾರೈಸಿದ್ದಾರೆ.

---------

ವರದಿ: ಅಚ್ಚು ಮುಂಡಾಜೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment