ಬೆಳ್ತಂಗಡಿ; ಗಂಡಿಬಾಗಿಲು ಇಲ್ಲಿನ ತೋಮಸ್ ಕುರಿಯಾಳಾಶೇರಿ ಎಂಬವರ ಮನೆಯು ಇತ್ತೀಚಿನ ಭೂ ಕುಸಿತ ದಿಂದ ತೀವ್ರಹಾನಿ ಗೊಳಗಾಗಿದ್ದು ಪ್ರಸ್ತುತ ಮನೆಯನ್ನು ಇಲ್ಲಿನ ಎಸ್ ಎಂ ವೈ ಎಂ ನೇತೃತ್ವ ದ ಯುವಕರ ಗುಂಪು ಬಾನುವಾರ ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿ ಮಾದರಿಯಾದರು.
ಇವರಿಗೆ ಸ್ಥಳೀಯ ಕೆ ಎಸ್ ಎಂ ಸಿ ಎ ಘಟಕದಿಂದ ಮಧ್ಯಾಹ್ನದ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸೇವಾ ಕಾರ್ಯಕರ್ತರ ತಂಡಕ್ಕೆ ಮಿಥುನ್ ನಾಯಕತ್ವ ವಹಿಸಿದ್ದರು. ಜೈಸನ್ ಆಧಿಲ್, ಅಭಿಲಾಷ್, ಐಸಾಕ್, ಶಾಲ್ವಿನ್, ಬ್ರದರ್ ಡೇನಿಸ್, ಜೋಸೆಫ್, ರಾಜು, ಸ್ಥಳೀಯ ಚರ್ಚಿನ ಧರ್ಮಗುರುಗಳಾದ ಫಾ. ಷಾಜಿ ಮಾತ್ಯು ಇವರೂ ಜಿತೆಯಾಗುಬ ಮೂಲಕ ಹುರುಪು ನೀಡಿದರು.