Posts

ಪುತ್ತೂರು ಚರಣ್‌ರಾಜ್ ಕೊಲೆಗಾರರಲ್ಲಿ ಮೂವರು ಅರೆಸ್ಟ್

1 min read



ಪುತ್ತೂರು: ಕೆಲ ವರ್ಷಗಳ ಹಿಂದೆ ನಡೆದ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್‌ರಾಜ್ ರೈ ಅವರನ್ನು ಕೊಚ್ಚಿ ಕೊಲೆಗೈದವರ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂದಿತರನ್ನು ಪುತ್ತೂರು ತಾಲೂಕಿನ

ಕೆಯ್ಯೂರು ನಿವಾಸಿ ನರ್ಮೇಶ್ ರೈ(29), ನಿತಿಲ್ ಶೆಟ್ಟಿ(23) ಮತ್ತು ವಿಜೇಶ್(22) ಎಂಬವರೆಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಪೂಜಾರಿ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಈ ಹಿಂದೆ ನಡೆದ ಕಾರ್ತಿಕ್ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಚರಣ್ ರಾಜ್ ರನ್ನು ಕಲ್ಲಡ್ಕದ ಕಿಶೋರ್‍ ಪೂಜಾರಿ ತಂಡವು ಹತ್ಯೆ ಮಾಡಿತ್ತು ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಎಸ್‌.ಪಿ ಸೋನಾವಣೆ ಋಷಿಕೇಷ್‌ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ, ಪೊಲೀಸ್ ಉಪಾಧೀಕ್ಷಕರಾದ ಗಾನ ಪಿ ಕುಮಾರ್ ರವರ ಸೂಚನೆಯಂತೆ, ಸುಳ್ಯ ಠಾಣೆಯ ವೃತ್ತ ನಿರೀಕ್ಷಕರಾದ ನವೀನ್‌ಚಂದ್ರ ಜೋಗಿ, ಬೆಳ್ಳಾರೆ ಪಿಎಸ್ಐ ರುಕ್ಮ ನಾಯ್ಕ್, ಸಂಪ್ಯ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಉದಯ ರವಿ ನೇತೃತ್ವದ ತಂಡ ಭಾಗಿಯಾಗಿದೆ ಎಂದು ಇಲಾಖೆ ತಿಳಿಸಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment