ಬೆಳ್ತಂಗಡಿ; ತೈಲ ಬೆಲೆ ಏರಿಕೆ ವಿರುದ್ಧ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ನೇತೃತ್ವದಲ್ಲಿ ಉಜಿರೆಯ ಪಿ.ಸಿ.ಪೈ ಪೆಟ್ರೋಲ್ ಬಂಕ್ ಬಳಿಯಿಂದ ಬೆಳ್ತಂಗಡಿಯ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್ ವರೆಗೆ ಸೈಕಲ್ ಜಾಥಾ, ಪಾದಯಾತ್ರೆ, ಎತ್ತಿನಗಾಡಿ ಯಾತ್ರೆ ಜು.7 ರಂದು ಬುಧವಾರ ನಡೆಯಿತು.
ಮಾಜಿ ಶಾಸಕ ವಸಂತ ಬಂಗೇರ ಚಾಲನೆ ನೀಡಿದರು.
ಜಾಥಾದ ನೇತ್ರತ್ವವನ್ನು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ವಹಿಸಿದ್ದರು.
ಪಕ್ಷದ ವಕ್ತಾರ ಮನೋಹರ್ ಕುಮಾರ್ ಇಳಂತಿಲ(ನಗರ), ಕೇಶವ ಪಿ ಗೌಡ(ಗ್ರಾಮೀಣ), ಎಸ್.ಸಿ ಎಸ್‌ಸಿ ಘಟಕ ಗ್ರಾಮೀಣದ ಅಧ್ಯಕ್ಷ ರವಿ ನೇತ್ರಾವತಿ ನಗರ, ನಮಿತಾ, ಅಶ್ರಫ್ ನೆರಿಯ, ಅಯ್ಯೂಬ್ ಡಿ.ಕೆ, ಅಭಿನಂದನ್ ಹರೀಶ್ , ಅರೆಕ್ಕಲ್ ಮಮ್ಮಿಕುಂಞಿ, ಸಂದೀಪ್ ನೀರಲ್ಲೆ, ಮಧು, ವಿ.ಟಿ ಸೆಬಾಸ್ಟಿಯನ್, ನಾರಾಯಣ ಗೌಡ ದೇವಸ್ಯ, ಶಾಲಿನಿ, ನಾಮದೇವ ರಾವ್, ಕಸ್ತೂರಿ ಕೇಶವ್, ಅಬ್ದುಲ್ ರಹಿಮಾನ್ ಪಡ್ಪು, ಸಲೀಂ ಗುರುವಾಯನಕೆರೆ, ಹಸನಬ್ಬ ಚಾರ್ಮಾಡಿ, ಅಯಾಝ್ ಚಾರ್ಮಾಡಿ, ದಯಾನಂದ ಬೆಳಾಲು, ಲಕ್ಷ್ಮಣ ಗೌಡ ಬಂಗಾಡಿ, ಉಷಾ ಶರತ್, ದಿನೇಶ್ ಗೌಡ ಬೆಳಾಲು, ಜಯವಿಕ್ರಮ ಕಲ್ಲಾಪು, ಇಸುಬು ಇಳಂತಿಲ, ಭರತ್ ಇಂದಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು