ಬೆಳ್ತಂಗಡಿ; ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ತಂಙಳ್ ಕೂರತ್ ರವರ ನಿರ್ದೇಶನದಂತೆ ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಇವರು ಬೆಳ್ತಂಗಡಿ ತಾಲೂಕಿನಾದ್ಯಂತ ಕೋವಿಡ್‌ನಿಂದ ಮರಣಹೊಂದಿದವರ ಮನೆಗಳಿಗೆ ಸಂದರ್ಶನ ನೀಡಿ ಆಹಾರ ಕಿಟ್ ಹಾಗೂ ಕೆಲಸವಿಲ್ಲದೇ ಮನೆಯಲ್ಲಿರುವ ಉಲಮಾಗಳಿಗೆ ಆಹಾರ ಕಿಟ್ ಹಾಗೂ ಧನ ಸಹಾಯ ವಿತರಣೆ ನಡೆಸಿದರು.
ಗುರುವಾಯನಕೆರೆ ಶೈಖ್ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಅಬ್ದುರ್ರಶೀದ್ ಬಲಿಪಾಯ ನೆರಿಯ, ಹಂಝ ಮದನಿ ಗುರುವಾಯನಕೆರೆ, ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಕಾಸಿಮ್ ಮುಸ್ಲಿಯಾರ್ ಮಾಚಾರು, ಗುರುವಾಯನಕೆರೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಲತ್ವೀಫ್ ಹಾಜಿ ಎಸ್‌ಎಂಎಸ್, ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ ಮೊದಲಾದವರು ಹಾಜರಿದ್ದರು.