ಬೆಂಗಳೂರು, ಜು.26: ಕೊನೆಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನ ಸೌಧದಲ್ಲಿಂದು ಏರ್ಪಡಿಸಿದ್ದ ಸಮಾರಂಭದಲ್ಲಿ ವಿದಾಯ ಭಾಷಣ ಮಾಡಿದ ಅವರು, ತಮ್ಮ ರಾಜಕೀಯ ಏಳು -ಬೀಳುಗಳನ್ನು ಹೇಳುವಾಗ ಭಾವುಕರಾದರು.
ಮುಖ್ಯಮಂತ್ರಿಯಾದಾಗ ಕೇಂದ್ರದವರು ಸಚಿವ ಸಂಪುಟ ರಚನೆಗೆ ಬಿಡಲಿಲ್ಲ ಎಂದು ಹೇಳಿದರು.
ಇಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.