ಬೆಳ್ತಂಗಡಿ; ಮೂಡಬಿದ್ರೆ ತಾಲೂಕು ಪಡುಮರ್ನಾಡು ಗ್ರಾಮದ ಕಾಯರ್‌ಕಟ್ಟ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಗುಂಡುಕಲ್ಲು ಇಲ್ಲಿನ ಆಡಳಿತಾಧಿಕಾರಿಯಾಗಿ ಮಾಜಿ ಸೈನಿಕ, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಅವರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿದೆ.
ಆ ಹಿನ್ನೆಲೆಯಲ್ಲಿ ಅವರು ಜೂ.2 ರಂದೇ ಅಧಿಕಾರ ವಹಿಸಿಕೊಂಡಿದ್ದಾರೆ.
ಮುಹಮ್ಮದ್ ರಫಿ ಅವರು ಪ್ರಸ್ತುತ ಕಚ್ ಮೆಮನ್ ಮಸ್ಜಿದ್ ಬಂದರ್ ಮಂಗಳೂರು ಮತ್ತು ಝಕರಿಯಾ ಜುಮ್ಮಾ ಮಸ್ಜಿದ್ ಬೆಳ್ಳಾರೆ ಸುಳ್ಯ ಇಲ್ಲಿನ ಆಡಳಿತಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ. ಈ ಹಿಂದೆ ಅವರು ಕಾಜೂರು ಸಂಸ್ಥೆಯ ಆಡಳಿತಾಧಿಕಾರಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಜಾಮಿಯಾ ಮಸ್ಜಿದ್ ಬೆಳ್ತಂಗಡಿ ಇಲ್ಲಿನ ಅಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆಯಲ್ಲಿರುವ ಅವರು ಗುರುವಾಯನಕೆರೆ ಉರೂಸ್ ಸಮಿತಿ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಆಡಳಿತಾತ್ಮಕ ಅನುಭವ ಹೊಂದಿದವರಾಗಿದ್ದಾರೆ.
ಮುಹಮ್ಮದ್ ರಫಿ ಅವರು ಜೂ.2 ರಂದು ಅಧಿಕಾರ ವಹಿಸುವ ಸಂದರ್ಭದಲ್ಲಿ ವಕ್ಫ್ ಜಿಲ್ಲಾ ಅಧಿಕಾರಿ ಸಯ್ಯಿದ್ ಮುಹಝಮ್ ಪಾಶಾ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಸಲಾಂ ಮದನಿ ಗುಂಡುಕಲ್ಲು ಹಾಗೂ ಜಮಾಅತರು ಉಪಸ್ಥಿತರಿದ್ದರು.