ಬೆಳ್ತಂಗಡಿ; ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧಾರ್ಮಿಕ ಸಂಪ್ರದಾಯದಂತೆ ಮಳಿಗೆಯ ಶುದ್ದೀಕರಣ ಹಾಗೂ ಆಶೀರ್ವಚನ ಕಾರ್ಯಕ್ರಮವು ಫೆ.24 ರಂದು ನಡೆಯಿತು.
ಸಂಸ್ಥೆಯಲ್ಲಿ 26 ವರ್ಷಗಳಿಂದ ನಡೆದುಬಂದ ಪ್ರಕಾರ ಸಂಸ್ಥೆಯ ಸಿಬ್ಬಂದಿಗಳು ಸೇರಿ ಮಾಡುವ ದೈನಂದಿನ ಸರ್ವ ಧರ್ಮೀಯರ ಪ್ರಾರ್ಥನೆ ಮಡೆಯಿತು. ಕುರಾನ್ ಅನ್ನು ಸಂಸ್ಥೆಯ ಸಿಬ್ಬಂದಿಗಳಾದ ಕು.ಸುರಕ್ಷಾ ಕುರಾನ್ ಪ್ರಾರ್ಥನೆಯನ್ನು , ರಮೇಶ್ ಭಗವದ್ಗೀತೆಯನ್ನು , ಸುಶ್ಚಿತಾ ಅವರು ಬೈಬಲ್ ಧರ್ಮಸಂದೇಶವನ್ನು ವಾಚಿಸಿದರು. ಸಂಸ್ಥೆಯ ಮಾಲಕರಾದ ಆಲ್ಫೋನ್ಸ್ ಫ್ರಾಂಕೋ ಅವರು ಸರ್ವರಿಗಾಗಿ ಪ್ರಾರ್ಥಿಸಿದರು. ಕಾರವಾರ ಕ್ರೈಸ್ತ ಧರ್ಮಕೇಂದ್ರದ ನಿರ್ದೇಶಕ ರೆ.ಫಾ. ಉರ್ಬನ್ ಫೆರ್ನಾಂಡೀಸ್ ರವರು ಆಶೀರ್ವಚನ ನೀಡಿದರು. ಅತಿಥಿಗಳಾಗಿ ಕೆನರಾ ಬ್ಯಾಂಕ್ ಪ್ರಬಂಧಕ ಗಿರೀಶ್ ಗುರುವಾಯನಕೆರೆ , ಪತ್ರಕರ್ತ ಶಿಬಿ ಧರ್ಮಸ್ಥಳ, ಕೆಥೋಲಿಕ್ ಸಹಕಾರಿ ಸಂಘದ ಅಧ್ಯಕ್ಷ ಅಲೋಸಿಯಸ್ ಲೋಬೋ, ಸಿಇಒ ಐವನ್ ಗೋನ್ಸಾಲ್ವಿಸ್, ನ್ಯಾಷನಲ್ ಇನ್ಶೂರೆನ್ಸ್ ಅಭಿವೃದ್ಧಿ ಅಧಿಕಾರಿ ಜೋನ್ ಅರ್ವಿನ್ ಡಿ'ಸೋಜಾ, ದಂತ ವೈದ್ಯೆ ಡಾ . ಹೈಮಾ ಪಿ.ಎಸ್, ಫೆಲಿಕ್ಸ್ ಹಿರೇಬೈಲು ಚಿಕ್ಕಮಗಳೂರು , ಶ್ರೀಮತಿ ಎಲೈಜಾ ಫ್ರಾಂಕೋ, ಸೋಜಾ ಸಂಸ್ಥೆಯ ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜಾ ಉಪಸ್ಥಿತರಿದ್ದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ಸ್ವಯಂಚಾಲಿತ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಕಥೋಲಿಕ್ ಬ್ಯಾಂಕ್ ಗೆ ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ಸಿಬ್ಬಂದಿ ರಮೇಶ್ ನಿರೂಪಿಸಿದರು. ಇಂಜಿನಿಯರ್ ರಾಹುಲ್ ಸ್ವಾಗತಿಸಿದರು. ಶಶಿಕಲಾ ಧನ್ಯವಾದವಿತ್ತರು. ಸುರಕ್ಷಾ ಮತ್ತು ಸುಶ್ಮಿತಾ ಕಾರ್ಯಕ್ರಮ ಸಂಯೋಜಿಸಿದರು. ನಿಝಾಮ್ ಹಾಡು ಪ್ರಸ್ತುತ ಪಡಿಸಿದರು.