ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಆಡಳಿತಕ್ಕೊಳಪಟ್ಟ ರಹ್ಮಾನಿಯಾ ಎಜುಕೇಶನ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ರಾಹಾ ಪಬ್ಲಿಕ್ ಸ್ಕೂಲ್' ಶಿಕ್ಷಣ ಸಂಸ್ಥೆಗಳ ಪ್ರಾರಂಭೋತ್ಸವವು ಜೂ.1 ರಂದು ಜರುಗಿತು.
ಅಧ್ಯಕ್ಷತೆಯನ್ನು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆಯು ಇಬ್ರಾಹಿಂ ವಹಿಸಿದ್ದು, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಘೋಷಿಸಿದರು.
ನೂತನವಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಮೊದಲ ಅಕ್ಷರ ಬರೆಸಿಕೊಡುವ ಮೂಲಕ ಪ್ರಧಾನ ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಿದರು. ಶಿಕ್ಷಣವು ಕೇವಲ ಅಕ್ಷರಾಭ್ಯಾಸಕ್ಕೆ ಸೀಮಿತವಾಗದೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಮತ್ತು ನೈತಿಕ ಮೌಲ್ಯಾಧಾರಿತ ಬದುಕಿಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಕಾಜೂರಿನಲ್ಲಿ ನಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ಆತ್ಮೀಯವಾದ ಶ್ಲಾಘನೀಯವಾದ ಶೈಕ್ಷಣಿಕ ಸೇವೆಯನ್ನು ಒದಗಿಸುತ್ತಿದೆ ಎಂದು ಅವರು ಅಭಿನಂದಿಸಿದರು.
ರಾಹಾ ಪಬ್ಲಿಕ್ ಸ್ಕೂಲ್ ಶೈಕ್ಷಣಿಕ ನಿರ್ದೇಶಕರಾದ ಕೆಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಹೆತ್ತವರ ಪಾತ್ರದ ಬಗ್ಗೆ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಕಾಜೂರು ಆಡಳಿತ ಸಮಿತಿ ಪ್ರ. ಕಾರ್ಯದರ್ಶಿ ಜೆ. ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಂ ಕಮಾಲ್, ಉಪಾಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಸದಸ್ಯರಾದ ಬದ್ರುದ್ದೀನ್ ಹೆಚ್ ಮತ್ತು ಎನ್.ಎಂ ಯಾಕೂಬ್, ಶೈಕ್ಷಣಿಕ ಸಮಿತಿಯ ಸದಸ್ಯರುಗಳಾದ ಉಮರುಲ್ ಅಶ್ಪಾಕ್, ಆಸಿಫ್ ಜೆ.ಹೆಚ್, ಅಬ್ದುಲ್ ಮಜೀದ್ ಕುಕ್ಕಾವು ಮತ್ತು ಬಶೀರ್, ದಿಡುಪೆ ಮಸ್ಜಿದ್ ಅಧ್ಯಕ್ಷ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್, ಜಿ. ನಗರ ಮಸ್ಜಿದ್ ಅಧ್ಯಕ್ಷ ಉಸ್ಮಾನ್ ಪಗರೆ, ಸ್ವಲಾತ್ ಸಮಿತಿ ಅಧ್ಯಕ್ಷ ಪಿ.ಎ ಅಬ್ದುಲ್ ಅಝೀಝ್ ಆರ್‌ಡಿಸಿ ಅಧ್ಯಕ್ಷ ಮುಹಮ್ಮದ್ ಶರೀಫ್ ಹೈಟೆಕ್, ಶರೀಅತ್ ಕಾಲೇಜು ಉಪನ್ಯಾಸಕ ಆಸಿಫ್ ಮದನಿ, ಮದರಸ ಮುಖ್ಯೋಪಾಧ್ಯಾಯ ಡಿ.ಕೆ ರಶೀದ್ ಮದನಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರ್ ಮೊದಲಾದವರು ಉಪಸ್ಥಿತರಿದ್ದರು.
ಶರೀಅತ್ ಕಾಲೇಜು ಉಪನ್ಯಾಸಕ ಅಬ್ದುಲ್ ರಹಿಮಾನ್ ಸಅದಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಶಂಸಾದ್ ಎಸ್ ಬೆರ್ಕಳ ಸ್ವಾಗತಿಸಿದರು. ಶಿಕ್ಷಕ ಶಮೀರ್ ಧನ್ಯವಾದವಿತ್ತರು.