ಬೆಳ್ತಂಗಡಿ; ಸಂಘ ಸಂಸ್ಥೆಯೇ ಇರಲಿ ಅಥವಾ ಸಮಾಜವೇ ಇರಲಿ ಇತಿಹಾಸದ ಅರಿವು ಇರುವ ವ್ಯಕ್ತಿ ಮಾತ್ರ ಹೊಸ ಇತಿಹಾಸ ಬರೆಯಲು ಸಾಧ್ಯ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಹೇಳಿದರು.
48 ವರ್ಷಗಳ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇಲ್ಲಿಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗುರುವಾಯನಕೆರೆಯ ಮಯೂರ ಆರ್ಕೆಡ್ ಸಭಾಂಗಣದಲ್ಲಿ ಸಭೆ ನಡೆಯಿತು.
ಮುಂದುವರಿದು ಮಾತನಾಡಿದ ಅವರು 104 ವರ್ಷಗಳ ಇತಿಹಾಸ ಹೊಂದಿರುವ, 225 ದೇಶಗಳಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ಇಂದು ಒಟ್ಟು 14 ಲಕ್ಷ ಸದಸ್ಯರನ್ನೊಳಗೊಂಡಿದೆ. ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕರಾದ ಎಂ.ಜಿ ಶೆಟ್ಟಿ ಮತ್ತು ವಿ.ಆರ್ ನಾಯ್ಕ್ ಅವರು ಈಗಲೂ ನಮ್ಮ ಜೊತೆ ಇರುವುದು ಹೆಮ್ಮೆಯ ವಿಚಾರ. ಕೋವಿಡ್ ಸಂಕಷ್ಟದ ಮಧ್ಯೆಯೂ ಜಿಲ್ಲಾ ಲಯನ್ಸ್ ಒಟ್ಟು 11 ಹೊಸ ಕ್ಲಬ್ ಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಹೊಸ ಕ್ಲಬ್ ಕೂಡ ಸೇರಿದೆ ಎಂದರು. ಸಮಾಜದಲ್ಲಿ ಇರುವ ನಾವು ಸೇವೆಗಾಗಿ ತೆರೆದುಕೊಳ್ಳಬೇಕು. ಓರ್ವ ವ್ಯಕ್ತಿ ಕೊಡುಗೆ ನೀಡಿದರೆ ಅದು ದಾನವಾಗುತ್ತದೆ. ಆದರೆ ಸಂಘ ಸಂಸ್ಥೆಗಳ ಹೆಸರಿನಲ್ಲಿ ಎಲ್ಲರ ಜೊತೆ ಸೇರಿ ಸಹಕಾರ ನೀಡಿದರೆ ಅದು ಸೇವೆಯಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ನಮ್ಮ ಸಂಸ್ಥೆಗೆ ಹೊಸ ಸದಸ್ಯರಾಗಿ ಸೇರುವವರನ್ನು ಆಹ್ವಾನಿಸುತ್ತೇವೆ. ಓರ್ವ ಸದಸ್ಯ ಸೇರುತ್ತಾರೆ ಎಂದರೆ ಅದು ಸೇವೆಗೆ ನಮ್ಮ ಜೊತೆ ಎರಡು ಕೈಗಳು ಸೇರುತ್ತಿವೆ ಎಂದೇ ಭಾವಿಸುತ್ಗೇವೆ ಎಂದರು. ಜಿಲ್ಲೆಯಿಂದ ಅನೇಕ ಕಾರ್ಯಕ್ರಮಗಳನ್ನು ನೀಡುವ ಯೋಜನೆ ರೂಪಿತವಾಗುತ್ತಿದ್ದು ಡಯಾಬಿಟಿಸ್ ಸ್ಕ್ರೀನಿಂಗ್ ಮೊಬೈಲ್ ಯುನಿಟ್ ಅದರಲ್ಲಿ ಮಹತ್ವದ್ದಾಗಿದೆ ಎಂದರು.
ಆತಿಥೇಯ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ಯರ್ಡೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ವಲಯಾಧ್ಯಕ್ಷ ವಸಂತ ಶೆಟ್ಟಿ, ಜಿಲ್ಲಾ ಸಂಪುಟದ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಪ್ರಮುಖ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳಾದ ಹರ್ಮನ್ ಮಾರ್ಟಿನ್ ಡಿಸಿಲ್ವಾ, ಆನಂದ ಸಿಂಧೂರ್ ಗುರುಪುರ ಕೈಕಂಬ, ದಯಾನಂದ ರೈ ಕಟೀಲು ಎಕ್ಕಾರು, ವಿನೋದ್ ಡಿಕೋಸ್ತಾ ಮೂಡಬಿದ್ರೆ ಇವರು ಉಪಸ್ಥಿತರಿದ್ದರು.ಬಿಒಡಿ ದೃಷ್ಯಅಧ್ಯಕ್ಷ ಹೇಮಂತ ರಾವ್ ಅವರಿಂದ ಸ್ವಾಗತ
ಕಿರಣ್ ಕುಮಾರ್ ಶೆಟ್ಟಿ ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿದರು. ಸುಭಾಷಿಣಿ ಪ್ರಾರ್ಥನೆ ಹಾಡಿದರು. ಧ್ವಜವಂದನೆಯನ್ನು ರಾಮಕೃಷ್ಣ ನಡೆಸಿದರು. ಘಟಕದ ವರದಿಯನ್ನು ಅನಂತಕೃಷ್ಣ ವಾಚಿಸಿದರು.
ಸ್ಥಾಪಕ ದಿನಾಚರಣೆಯ ಅಂಗವಾಗಿ ದೀಪ ಪ್ರಜ್ವಲನ ನಡೆಸಿದ ಸ್ಥಾಪಕ ಸದಸ್ಯ ಎಂ.ಜಿ ಶೆಟ್ಟಿ ಮತ್ತು ವಿ.ಆರ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅವರ ಪರಿಚಯವನ್ನು ಪ್ರಕಾಶ್ ಶೆಟ್ಟಿ ನೊಚ್ಚ ನಡೆಸಿದರು. ಹೊಸ ಸದಸ್ಯರ ಪರಿಚಯವನ್ನು ಡಾ. ದೇವಿ ಪ್ರಸಾದ್ ಬೊಳ್ಮ, ಲಕ್ಷ್ಮಣ ಮಾಸ್ಟ್ರ್ ನಡೆಸಿಕೊಟ್ಟರು. ರಾಜ್ಯಪಾಲರ ಪರಿಚಯವನ್ನು ವಸಂತ ಶೆಟ್ಟಿ ನಡೆಸಿಕೊಟ್ಟರು. ಸೇವಾ ಚಟುವಟಿಕೆಯ ವಿವರವನ್ನು ಸುರೇಶ್ ಶೆಟ್ಟಿ ಲಾಯಿಲ ನೀಡಿದರು. ರಾಜ್ಯಪಾಲರ ಗೌರವಾರ್ಪಣೆಯ ನಿರ್ವಹಣೆಯನ್ನು ವಿ. ಆರ್ ನಾಯ್ಕ್ ನಡೆಸಿದರು. ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ದತ್ತಾತ್ರೇಯ ಬಿ ವಂದನಾರ್ಪಣೆಗೈದರು.