ಬೆಳ್ತಂಗಡಿ; ಮದ್ದಡ್ಕ ಪರಿಸರದ ಹಿಂದುಳಿದ ಜನರ ನೆರವಿನ ಉದ್ದೇಶ ಇಟ್ಟುಕೊಂಡು ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಎಂಬ ಸಂಸ್ಥೆ ಪ್ರಾರಂಭಿಸಲಾಗಿದ್ದು ಅದರ ಸುನ್ನೀ ಸೆಂಟರ್ ಕಚೇರಿಯನ್ನು ಹರೀಶ್ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಲಾಯಿತು.
ನೂತನ ಕಚೇರಿಯನ್ನು ಸಬರಬೈಲು ವಾದಿ ಇರ್ಫಾನ್ ಸಂಸ್ಥೆಯ ಚೇರ್ಮೆನ್, ಸಯ್ಯಿದ್ ಕಾಜೂರು ತಂಙಳ್ ಸುಪುತ್ರ ಪಝಲ್ ಜಮಲುಲ್ಲೈಲಿ ತಂಙಳ್ ಉದ್ಘಾಟಿಸಿದರು. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ದುಆಕ್ಕೆ ನೇತೃತ್ವ ನೀಡಿದರು.
ಮದ್ದಡ್ಕ ಖತೀಬ್ ರಫೀಕ್ ಅಹ್ಸನಿ, ಮಸ್ಜಿದ್ ಅಧ್ಯಕ್ಷ ಎಚ್.ಎಮ್ ಹಸನಬ್ಬ, ಟ್ರಸ್ಟ್ ಅಧ್ಯಕ್ಷ ಬಶೀರ್ ಆಲಂದಿಲ, ಟ್ರಸ್ಟ್ ಕಾರ್ಯದರ್ಶಿ ಅಜ್ಮಲ್ ಆಲಂದಿಲ, ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಸಮಿತಿ ಅಧ್ಯಕ್ಷ ಹಾಜಿ ಉಸ್ಮಾನ್ ಆಲಂದಿಲ, ಎಸ್‌ಎಮ್‌ಎ ಮಡಂತ್ಯಾರು ಸೆಂಟರ್ ಅಧ್ಯಕ್ಷ ಅಶ್ರಫ್ ಚಿಲಿಂಬಿ, ಮುಸ್ಲಿಂ ಜಮಾಅತ್ ತಾ.ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಕೆಸಿಎಫ್ ಅಬ್ದುಲ್ ಕರೀಂ ನೇರಳಕಟ್ಟೆ, ಎಸ್‌ವೈಎಸ್ ಮದ್ದಡ್ಕ ಘಟಕ ಅಧ್ಯಕ್ಷ ಎಂ.ಹೆಚ್ ಅಬೂಬಕ್ಕರ್, ಆಲಂದಿಲ ಘಟಕ ಅಧ್ಯಕ್ಷ ಅಬೂಸ್ವಾಲಿಹ್, ಎಸ್ಸೆಸ್ಸೆಫ್ ಮದ್ದಡ್ಕ ಶಾಖೆ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ರಾಝಿಯುದ್ದೀನ್ ಸಬರಬೈಲು, ಯು.ಆರ್ ಉಮರಬ್ಬ, ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಅತಿಥಿಯಾಗಿದ್ದ ಖ್ಯಾತ ವಾಗ್ಮಿ, ಎಸ್‌ವೈಎಸ್ ರಾಜ್ಯ ನಾಯಕ ಹುಸೈನ್ ಸಅದಿ ಕೆ.ಸಿ ರೋಡ್ ತಾಜುಲ್ ಉಲಮಾ ಸಂಸ್ಮರಣಾ ಭಾಷಣ ನಡೆಸಿಕೊಟ್ಟರು. ಇದೇ ವೇಳೆ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ವತಿಯಿಂದ ಪ್ರಥಮ ಐತಿಹಾಸಿಕ ಕಾರ್ಯಕ್ರಮದಂಗವಾಗಿ ಮುಂದಿನ ಫೆಬ್ರವರಿ ವೇಳೆ ಜಮಾಅತ್ ಗೊಳಪಟ್ಟ ಎರಡು ಯತೀಂ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯ ಕೈಗೊಳ್ಳಲು ಕೆ.ಸಿ ರೋಡ್ ಉಸ್ತಾದ್ ದಾನಿಗಳಿಂದ ದೇಣಿಗೆ ವಾಗ್ದಾನ ಮಾಡಿಸಿದರು.
ವೇದಿಕೆಯಲ್ಲಿ ಯಾಕೂಬ್ ಮುಸ್ಲಿಯಾರ್ ಪಣಕಜೆ, ಸಯ್ಯಿದ್ ಸಲೀಂ ತಂಙಳ್, ಸದರ್ ಡಿ.ಹೆಚ್ ಇಸ್ಮಾಯಿಲ್ ಸಖಾಫಿ, ಜೆ.ಎಮ್ ಇಸ್ಮಾಯಿಲ್ ಸಖಾಫಿ, ಜಮಾಲುದ್ದೀನ್ ಲೆತೀಫಿ, ಅಬ್ದುಲ್ ರಹೀಂ ಸಖಾಫಿ, ಮುಹಮ್ಮದ್ ರಫೀಕ್ ಸಖಾಫಿ, ಮಡಂತ್ಯಾರು ಸೆಂಟರ್ ಅಧ್ಯಕ್ಷ ಹಂಝ ಮದನಿ, ನೂರುಲ್ ಹುದಾ ಜುಮ್ಮಾ ಮಸ್ಜಿದ್ ಮದ್ದಡ್ಕ ಕಾರ್ಯದರ್ಶಿ ಸಿರಾಜ್ ಚಿಲಿಂಬಿ, ಕೋಶಾಧಿಕಾರಿ ರಿಯಾಝ್ ಸಬರಬೈಲು, ಕೆಎಮ್‌ಜೆ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಸ್ವಾಲಿಹ್ ಆಲಂದಿಲ, ಗುರುವಾಯನಕೆರೆ ಜಮಾಅತ್ ಅಧ್ಯಕ್ಷ ಅಬ್ದುಲ್ಲತೀಫ್, ಮಡಂತ್ಯಾರು ಮಸ್ಜಿದ್ ಅಧ್ಯಕ್ಷ ಜಿ ನಝೀರ್, ಉದ್ಯಮಿ ಉಸ್ಮಾನ್ ಜಿ.ಕೆರೆ, ಜಿ.ಕೆ ಮುಹಮ್ಮದ್ ಶರೀಫ್, ಯಾಕೂಬ್,ಅಬ್ಬಾಸ್ ಲಾಡಿ, ಹೈದರ್, ಇಸ್ಮಾಯಿಲ್ ಕನ್ನಡಿಕಟ್ಟೆ, ಇಬ್ರಾಹಿಂ, ಮದ್ದಡ್ಕ ಹೆಲ್ಪ್‌ಲೈನ್ ಅಧ್ಯಕ್ಷ ಝಹೀರ್ ಮೊದಲಾದವರು ಉಪಸ್ಥಿತರಿದ್ದರು.
ಉಮರ್ ಮಾಸ್ಟರ್ ಸ್ವಾಗತಿಸಿದರು. ರಹೀಂ ಸಖಾಫಿ ಆಲಂದಿಲ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಡಿವಿಷನ್ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಆರು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.