ಬೆಳ್ತಂಗಡಿ; ಹಾಸನ ಜಿಲ್ಲೆಯ ಬೇಲೂರು ಬಳಿ ಕಳೆದ ರಾತ್ರಿ ಅಲ್ಟೊ ಕಾರು ಮರಕ್ಕೆ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆ ನಿವಾದಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಪಘಾತದಲ್ಲಿ ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಇನ್ನೂ ಮೂವರಿಗೆ ಹೆಚ್ಚಿನ ಗಾಯಗಳಾಗಿವೆ ಎಂದೂ ತಿಳಿದುಬಂದಿದೆ.
ಅಪಘಾತದಲ್ಲಿ ಮೃತರಾದ ದುರ್ದೈವಿಯನ್ನು ಪೆರಾಲ್ದರಕಟ್ಟೆಯ ಶರೀಫ್ ಎಂಬವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನೂರ್ ಮುಹಮ್ಮದ್, ಬಳಂಜದ ಅಝೀಝ್ ಹಾಗೂ ಕಕ್ಕಿಂಜೆಯ ಗಾಂಧಿ ನಗರ ನಿವಾಸಿ ಸಲೀಂ ಎಂಬವರಾಗಿದ್ದಾರೆ.
ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊರೆದೊಯ್ಯಲಾಗಿದೆ.
ಇವರೆಲ್ಲರೂ ಸಂಬಂದಿಗಳು ಹಾಗೂ ಸ್ನೇಹಿತರಾಗಿದ್ದು ಗಾರೆ ಕೆಲಸ, ಮೇಸ್ತ್ರಿ ಕೆಲಸ ಮಾಡಿಕೊಂಡವರಾಗಿದ್ದಾರೆ.
ಒಟ್ಟಿಗೆ ಜೊತೆಯಾಗಿ ಇವರು ತೀರ್ಥಕ್ಷೇತ್ರ ಝಿಯಾರತ್ ಗಾಗಿ ಆ ಭಾಗಕ್ಕೆ ತೆರಳಿ ವಾಪಾಸಾಗುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.
ಮೃತರಾದ ಶರೀಫ್ ಅವರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಅವರ ಶರೀರವನ್ನು ಮಂಗಳೂರಿನ ಖಾದಗಿ ಆಸ್ಪತ್ರೆಗೆ ತರಲಾಗಿದೆ.
------
ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130