Posts

ಮುಂಡಾಜೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮಾನವ ಸ್ಪಂದನ -ಚರ್ಚ್ ಟಾಸ್ಕ್ ಪೋರ್ಸ್ ತಂಡ

1 min read

ಬೆಳ್ತಂಗಡಿ; ಕೋವಿಡ್ ನಿಂದ ಮೃತಪಟ್ಟ ಮುಂಡಾಜೆ ಗ್ರಾಮದ ನಿವಾಸಿನಿ ತಯ್ಯಮ್ಮ ತೆಂಗೋಳಿ (70ವ.) ಅವರ ಅಂತ್ಯಸಂಸ್ಕಾರವನ್ನು ರವಿವಾರ ಮುಂಡಾಜೆ ಸೈಂಟ್ ಮೇರಿ ಚರ್ಚ್‌ನಲ್ಲಿ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ ಮತ್ತು ಎಲ್ಲಾ ಚರ್ಚ್‌ಗಳಲ್ಲಿ ರಚಿಸಲಾಗಿರುವ ಕಾರ್ಯಪಡೆಯ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನೆರವೇರಿಸಿಸಲಾಯಿತು.


ಮೃತರ ಪುತ್ರ ಬೆನ್ನಿ ತೆಂಗೋಳಿ ಅವರು ಸೌತ್ ಆಫ್ರಿಕಾದ ಅಂಕೋಲ ಎಂಬಲ್ಲಿ ವೃತ್ತಿಯಲ್ಲಿದ್ದು ಅವರು ಮಂಗಳೂರು‌ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದು‌ ಅವರನ್ನು ಪ್ರತ್ಯೇಕ ವಾಹನದಲ್ಲಿ ಪಿಪಿಇ ಕಿಟ್ ಧರಿಸಿ ಅವರನ್ನು ಕೋವಿಡ್ ಸೋಲ್ಜರ್ಸ್ ತಂಡದ ಅಜಿತ್ ಪಿ.ಎಮ್‌ ಗಂಡಿಬಾಗಿಲು ಅವರು ಕರೆತರುವ ಕೆಲಸ ಮಾಡಿದರು. ಮೃತದೇಹವನ್ನು ಮುಂಡಾಜೆ ಚರ್ಚ್‌ನ ದಫನ ಭೂಮಿಯಲ್ಲಿ ಸಂಸ್ಕಾರ ಕ್ರಿಯೆ ನೆರವೇರಿಸಲಾಯಿತು.

ಚರ್ಚ್‌ನ ಧರ್ಮಗುರುಗಳಾದ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್ ಅವರು ಧಾರ್ಮಿಕ ವಿಧಿ ನೆರವೇರಿಸಿದರು. ಕೈಸ್ತ ಧರ್ಮಪ್ರಾಂತ್ಯದ ಕಾರ್ಯಪಡೆ ಸಂಯೋಜಕ ಫಾ‌. ಬಿನೊಯ್ ಮಾಳಿಗೆಯಿಲ್ ಉಪಸ್ಥಿತರಿದ್ದರು.

ಮಾನವ ಸ್ಪಂದನ ತಂಡದ ಚೆರ್ಮೆನ್ ಪಿ.ಸಿ‌ ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ  ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಂಡದ ಕಾರ್ಯಕರ್ತರಾದ ಫಾ. ಫ್ರಾನ್ಸಿಸ್ ಓಡಂಪಳ್ಳಿಲ್, ಜೈಸನ್ ವೆರ್ಣೂರು,  ರಂಜಿತ್ ಅಮ್ಮಿನಡ್ಕ, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಲಿಜೋ ಚಾಕೋ ಅಮ್ಮಿನಡ್ಕ, ಥೋಮಸ್ ಪಿ.ಎ ಬಟ್ಯಾಲ್, ಥೋಮಸ್ ಪಿ.ಡಿ, ಪೌಲೋಸ್ ವಡಕಂಚೇರಿ, ಎಂ.ಶರೀಫ್ ಬೆರ್ಕಳ ಇವರು ಸಹಕರಿಸಿದರು.  


ಮುಂಡಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.‌ಕಾವ್ಯಾ ವೈಪನಾ ನಿರ್ದೇಶನ ನೀಡಿದರು.

ಮೃತರ ಪತಿ ಹಾಗೂ ಮನೆಯವರಿಗೆ ಕೂಡ ಕೋವಿಡ್ ದೃಢಪಟ್ಟವರಾಗಿದ್ದುರಿಂದ ಅವರನ್ನೂ ಅಗತ್ಯ ವ್ಯವಸ್ಥೆಯೊಂದಿಗೆ ಚರ್ಚ್ ಗೆ ಕರೆತರುವ ವ್ಯವಸ್ಥೆಯನ್ನೂ ಮಾನವ ಸ್ಪಂದನ ತಂಡದಿಂದ ಮಾಡಲಾಗಿತ್ತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

1 comment

  1. second ago
    Uthama kelsa