ಬೆಳ್ತಂಗಡಿ:ಕೋವಿಡ್ ಚೈನ್ ಬ್ರೇಕ್ ಫ್ರಂಟ್ ಲೈನ್ ಕಾರ್ಯಾಚರಣೆಯಲ್ಲಿ ಅವಿಸ್ಮರಣೀಯವಾಗಿ ತೊಡಗಿಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಮುಖ್ಯ ರಸ್ತೆಯ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಸಾಮಾಜಿಕ ಜಾಗೃತಿ ಮೂಡಿಸಲು ಆಹೋರಾತ್ರಿ ಶ್ರಮಿಸುತ್ತಿರುವ ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಬೆಳ್ತಂಗಡಿ ತಾ. ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದಿಂದ ಒಂದು ಹೊತ್ತಿನ ಉಪಹಾರ, ನೀರು, ತಂಪು ಪಾನೀಯ, N 95 ಮಾಸ್ಕ್ ವಿತರಣೆ ಕಾರ್ಯಕ್ರಮ ರವಿವಾರ ನಡೆಯಿತು.
ಬೆಳ್ತಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಎಂ. ಎಂ, ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು ಬೆಳ್ತಂಗಡಿಯ ಸಂತೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಯೋಜಕರಾಗಿದ್ದ ಐಡಿಯಲ್ ವೆಫರ್ಸ್ ಬನಾನಾ ಚಿಪ್ಸ್ ಕಂಪೆನಿ ಮಾಲಕ ಜೈಶನ್ ಕೋಲಾಟ್‌ಕುಡಿ, ಶಶಿರಾಜ್ ಗುರುವಾಯನಕೆರೆ, ದಿನೇಶ್ ಪೂಜಾರಿ ಬೆಳ್ತಂಗಡಿ, ಕಾರ್ನಾಟಕ ಮಾನವ ಹಕ್ಕುಗಳ ಸಮಿತಿ ದ.ಕ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.
ಮಾನವ ಸ್ಪಂದನ ತಂಡದ ಅಜಿತ್ ಪಿ.ಎಮ್, ಶಶಿರಾಜ್ ಶೆಟ್ಟಿ, ದೀಪಕ್ ಜಿ. ಉಪಸ್ಥಿತರಿದ್ದರು.
ಬೆಳ್ತಂಗಡಿ, ಗುರುವಾಯನಕೆರೆ, ಪುಂಜಾಲಕಟ್ಟೆ, ವೇಣೂರು ಠಾಣೆ, ಲಾಯಿಲ, ಉಜಿರೆ, ಕನ್ಯಾಡಿ, ಮುಂಡಾಜೆ, ಚಾರ್ಮಾಡಿ ಪೊಲೀಸ್ ಗೇಟ್ ಬಳಿಯ ಎಲ್ಲಾ ಪೊಲೀಸ್ ಸಿಬ್ಬಂದಿ, ಗೃಹರಕ್ಷಕದಳದ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಗ್ರಾಮ ಸಹಾಯಕರಿಗೆ ಆಯಾಯಾ ಕರ್ತವ್ಯ ಸ್ಥಳಕ್ಕೆ ತೆರಳಿ ಕೊಡುಗೆ ನೀಡಿ ಅವರನ್ನು ಗೌರವಿಸಲಾಯಿತು.
ಮಾನವ ಸ್ಪಂದನ ತಂಡದ ತಾ. ಚೆರ್ಮೆನ್ ಪಿ.ಸಿ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದು ಸ್ವಾಗತಿಸಿದರು.
ಕೋವಿಡ್ ಸೋಲ್ಜರ್ಸ್ ತಂಡದ ಮುಖ್ಯಸ್ಥ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವನೆಗೈದರು.
ಜೈಶನ್ ವೆರ್ಣೂರ್ ವಂದನಾರ್ಪಣೆಗೈದರು.