Posts

ಚಿಕ್ಕಮಗಳೂರಿನಿಂದ ಕಕ್ಕಿಂಜೆಯ ಅಜ್ಜಿ ಮನೆಗೆ ಬಂದಿದ್ದ ಬಾಲಕ ಆಕಸ್ಮಿಕವಾಗಿ ನೀರುಪಾಲು

1 min read

ಬೆಳ್ತಂಗಡಿ;  ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು ನದಿಯಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯೊಂದರಲ್ಲಿ ಚಿಕ್ಕಮಗಳೂರಿನಿಂದ ಅಜ್ಜಿ ಮನೆಗೆ ಬಂದಿದ್ದ ಎಂಟರ ಹರೆಯದ ಬಾಲಕ ಇಹಾನತುಲ್ಲಾ ಅವರು ದಾರುಣವಾಗಿ ಮೃತಪಟ್ಟಿದ್ದಾರೆ.

ದಡ್ಡು ನಿವಾಸಿ ಪುತ್ತಾಕ ಅವರ ಮೊಮ್ಮಗ, ಆಬಿದಾ ಮತ್ತು ಫಾರೂಕ್ ಅಬ್ದುಲ್ಲ ಅವರ ಮೂವರು ಮಕ್ಕಳಲ್ಲಿ ಮೊದಲನೆಯವನಾದ ಬಾಲಕನೇ ಆಕಸ್ಮಿಕ ಘಟನೆಯಿಂದ ಪ್ರಾಣಕಳೆದುಕೊಂಡವನು.

ಅಜ್ಜಿಗೆ ಅನಾರೋಗ್ಯ ಇದ್ದುದರಿಂದ ತಂದೆ , ತಾಯಿ ಜೊತೆ ರವಿವಾರ ಬೆಳಗ್ಗೆಯಷ್ಟೇ ಬಾಲಕ ಕಕ್ಕಿಂಜೆಗೆ ಬಂದಿದ್ದರು. ಉಪಹಾರ ಮುಗಿಸಿ ಮನೆಮಂದಿ ಎಲ್ಲರೂ ಜೊತೆ ಸೇರಿ ಎಂದಿನಂತೆ ಮನೆಯ ಪಕ್ಕದಲ್ಲೇ ಇರುವ ನದಿಗೆ ಬಟ್ಟೆಬರೆ ಒಗೆಯಲು ಮತ್ತು ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ನದಿ ಪಾತ್ರದಲ್ಲಿ ಆಟದಲ್ಲಿ ನಿರತನಾಗಿದ್ದ ಬಾಲಕ ಎಲ್ಲರ ಕಣ್ಣ ಮುಂದೆಯೇ ಆಯತಪ್ಪಿ ನೀರಿನಲ್ಲಿ ಮುಳುಗಿದರು. ತಕ್ಷಣ ಬಾಲಕನ ಮಾವ ದಡ್ಡು ಸೂಫಿ ಸಹಿತ ಇತರರು ಬಾಲಕನನ್ನು ನೀರಿನಿಂದ‌ ಮೇಲೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಮಗು ಕೊನೆಯಿಸಿರೆಳೆದಿತ್ತು.

ಘಟನೆ ಬಗ್ಗೆ ಬಾಲಕನ ತಂದೆ ಫಾರೂಕ್ ಅಬ್ದುಲ್ಲ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕ‌ ತಂದೆ, ತಾಯಿ, ಓರ್ವೆ ಸಹೋದರಿ ಹಲಾ‌ಮರಿಯಮ್(3 ವರ್ಷ), ಸಹೋದರ ವಿಲ್‌ದಾನ್( 8 ತಿಂಗಳು) ಸಹಿತ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment