ಬೆಳ್ತಂಗಡಿ; ದ.ಕ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಗೆ ಮಾತ್ರ ಸೀಮಿತವಾಗಿ ಜಿಲೆಯನ್ನು ಶುಕ್ರವಾರದಿಂದ ಮುಂದಿನ ಆದೇಶದವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ.
ಇದರನ್ವಯ ಅಗತ್ಯ ದಿನಸಿ ವಸ್ತುಗಳ ಮಳಿಗೆ ಬೆಳಿಗ್ಗೆ9.00 ಗಂಟೆ ವರೆಗೆ ಮಾತ್ರ ತೆರೆದಿರಲಿದ್ದು, 10.00 ಗಂಟೆಯೊಳಗೆ ಮಳಿಗೆದಾರರು ಮನೆ ಸೇರಬೇಕಾಗಿದೆ. ಮದುವೆ, ಔತಣಕೂಟ, ಗೃಹ ಪ್ರವೇಶ, ಬರ್ತ್ ಡೇ ಪಾರ್ಟಿ ಇವುಗಳೆಲ್ಲವನ್ನೂ ನಿರ್ಬಂಧಿಸಲಾಗಿದೆ.
ಮೆಡಿಕಲ್ ಶಾಪ್ ಹೆಸರಿನಲ್ಲಿ ಜನ ತಿರುಗಾಡುವಂತಿಲ್ಲ. ತೀರಾ ಅಗತ್ಯದ ಮೆಡಿಸಿನ್ ಆಗಿದ್ದಲ್ಲಿ ಹತ್ತಿರದ ಮೆಡಿಕಲ್ ವರೆಗೆ ಮಾತ್ರ ಹೋಗಬಹುದು. ಆದರೆ ಸರಿಯಾದ ಸಬೂಬು ನೀಡಲು ಪಾರ್ಟಿ ಸಿದ್ದವಾಗಿರಬೇಕು. ಜೊತೆಗೆ ಅನಗತ್ಯವಾಗಿ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕ ಇದ್ದು, ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಪೊಲೀಸ್ ಇಲಾಖೆ ಕೂಡ ಹೊಸ ನೀತಿಯನ್ನೂ ಪ್ರಕಟಿಸಿದೆ. ವಿನಾಕಾರಣ ರಸ್ತೆ ಗಿಳಿಯುವ ವಾಹನಗಳ ಮೇಲೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಜನ ಯಾವ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಅಂತರ ಪಾಲಿಸಬೇಕು.ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆ ಸ್ವತಃ ಅಂತವರು ಕೋವಿಡ್ ಪರೀಕ್ಷೆ ಕೈಗೊಳ್ಳಲು ಮುಂದೆ ಬರಬೇಕು. ರೋಗ ಹರಡದಂತೆ ಸರಕಾರವೇ ಸೂಚಿಸುವ ಕ್ವಾರೆಂಟೈನ್ ಕೇಂದ್ರಗಳಿಗೆ ಹೋಗಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶಿಸದ್ದಾರೆ.