Posts

ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಸ್ತೆ ದುರಸ್ತಿ‌ನೆಪ ನೀಲಯ್ಯ‌ ಮಲೆಕುಡಿಯ ಬಂಧನ; ಜಾಮೀನು ಬಿಡುಗಡೆ

1 min read


ಆದಿವಾಸಿಹಕ್ಕುಗಳ ಸಮನ್ವಯ ಸಮಿತಿ ಖಂಡನೆ;  
ಬೆಳ್ತಂಗಡಿ; ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಟ್ಟ ನಾರಾವಿ ಪಂಚಾಯತ್ ಕುತ್ಲೂರು ಪಂಜಳ ನಿವಾಸಿ ನೀಲಯ್ಯ ಮಲೆಕುಡಿಯ ಅವರನ್ನು ವನ್ಯಜೀವಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ. ಅಲ್ಲದೆ ಇನ್ನೂ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕುತ್ಲೂರಿನಲ್ಲಿ ಆದಿವಾಸಿಗಳಾದ ನೀಲಯ್ಯ ಮಲೆಕುಡಿಯ, ಪ್ರವೀಣ, ವಿಶ್ವನಾಥ ಮತ್ತು ಹೊನ್ನಯ್ಯ ಅವರ  ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ವನ್ಯಜೀವಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪೈಕಿ ನೀಲಯ್ಯ ಮಲೆಕುಡಿಯ ಅವರನ್ನು ಬಂಧಿಸಿದ್ದರು. ಆದರೆ ತಕ್ಷಣ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ ನ್ಯಾಯವಾದಿ, ಸಿಪಿಐಎಂ ಮುಖಂಡ ಶಿವಕುಮಾರ್ ಎಂ.ಎಸ್ ಅವರು ವಾದ ಮಂಡಿಸಿ ಅವರಿಗೆ ಜಾಮೀನು‌ ಮಂಜೂರುಮಾಡಿಸುವಲ್ಲಿ ಸಫಲರಾಗಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಡಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಣ್ಯ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ, ತಮ್ಮ‌ಮೂಲಭೂತ ಹಕ್ಕಾದ ಇದ್ದ ರಸ್ತೆಯನ್ನು ದುರಸ್ಥಿ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೂ ಅರಣ್ಯ ಅಧಿಕಾರಿಗಳ ನಡೆ ಅರಣ್ಯ ವಾಸಿಗಳಲ್ಲಿ ಆಕ್ರೋಶ ತಂದಿದೆ.
ಒಂದೆಡೆ ಶಾಸಕ ಹರೀಶ್ ಪೂಂಜ ಅವರು ಬೆಂಗಳೂರು ಮಟ್ಟದಲ್ಲಿ  ಪ್ರಯತ್ನಿಸಿ ರಾಷ್ಟ್ರೀಯ ಉದ್ಯಾನವನದೊಳಗೇ ಬರುವ ದಿಡುಪೆ- ಸಂಸ್ಥೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ವೇ ಕಾರ್ಯಕ್ಕೆ ಸರಕಾರಸಿಂದ ಸಂಬಂಧಪಟ್ಟ ಇಲಾಖೆಗೆ ಆದೇಶಿಸಿದ್ದಾರೆ. ಆದರೆ ಇನ್ನೊಂದೆಡೆ ಅರಣ್ಯ ಅಧಿಮಾರಿಗಳು ಉದ್ಯಾನವನ ನಿವಾಸಿಗಳ ಮೇಲೆ ಕೇಸು ಜಡಿಯುವ ಮೂಲಕ ಇಬ್ಬಗೆ ನೀತಿ ಅನುಸರಿಸಿದ್ದಾರೆ. ಇದು ತರವಲ್ಲ ಎಂಬುದು ಆದಿವಾಸಿಗಳ ಕೂಗು.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment