Posts

ಮಜ್'ಮಉಸ್ಸಆದ ನೋಲೆಜ್ ಏಂಡ್ ಚಾರಿಟಿ ಫೌಂಡೇಶನ್(ರಿ) ಲಾಡಿ ಗೆ ಶಿಲಾನ್ಯಾಸ

1 min read


ಬೆಳ್ತಂಗಡಿ; ಮಜ್'ಮಉಸ್ಸಆದ ನೋಲೆಜ್ ಏಂಡ್ ಚಾರಿಟಿ ಫೌಂಡೇಶನ್ (ರಿ)ಲಾಡಿ ಇದರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ  ಶೈಖುನಾ ಕರೋಪಾಡಿ ಅಬ್ದುಲ್ ಹಕೀಂ ಮದನಿ ಅವರ ನೇತೃತ್ವದಲ್ಲಿ ನಡೆಯಿತು.

 ಮಜ್ ಮಉಸ್ಸಆದ ಲಾಡಿ ಅಧ್ಯಕ್ಷರಾದ ಬದ್ರುದ್ದೀನ್ ಮದ್ದಡ್ಕ, ಉಳ್ತೂರು ಮುದರ್ರಿಸ್ ಮುಹಮ್ಮದ್ ಫಾಳಿಲಿ ಅಲ್ ಫುರ್ಖಾನಿ, ಮದ್ದಡ್ಕ‌‌ ಖತೀಬ್  ರಫೀಕ್ ಅಹ್ಸನಿ , ಪಡಂಗಡಿ ಗ್ರಾ.ಪಂ ಸದಸ್ಯ ಅಹ್ಮದ್ ಇವರು ಶುಭಕೋರಿದರು.

ಸಮಾರಂಭದಲ್ಲಿ ಶಾಫಿ ಮದನಿ ಪಾಂಡವರಕಲ್ಲು, ಅಬ್ಬಾಸ್ ಮುಸ್ಲಿಯಾರ್ ಆರೋದು, ಮುಹಮ್ಮದ್ ಅಲೀ ಮುಈನಿ,ಬದ್ರುದ್ದೀನ್ ಲತೀಫಿ, ಲಾಡಿ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್, ಕನ್ನಡಿಕಟ್ಟೆ ಮಸೀದಿ ಅಧ್ಯಕ್ಷ ಯೂಸುಫ್ ಕನ್ನಡಿಕಟ್ಟೆ, ಉಳ್ತೂರು‌ ಮಸೀದಿ ಕಾರ್ಯದರ್ಶಿ ಕೆ ಎಚ್ ಅಬ್ದುಲ್ ಅಝೀಝ್,‌ಅಬ್ಬಾಸ್ ಸುಪಾರಿ ಲಾಡಿ, ಯೂಸುಫ್ ಸುಪಾರಿ ಲಾಡಿ, ಆಶಿದ್ ಪಾದೆ, ಅಬ್ದುಲ್ಲಾ ಲಾಡಿ, ಸಾಗರ್ ಹಾಜಿ ಮದ್ದಡ್ಕ,

ಅಬ್ದುಲ್ ಕಾದರ್ ಉಳ್ತೂರು, ಅಶ್ರಫ್ ಲಾಡಿ, ಸ್ವಾದಿಖ್ ಲಾಡಿ, ಇರ್ಷಾದ್ ಲಾಡಿ, ಸುಫ್ಯಾನ್ ಲಾಡಿ ಮೊದಲಾದವರು ಉಪಸ್ಥಿತರಿದ್ದರು. 

ಸಂಸ್ಥೆಯ‌ ಪ್ರಧಾನ ಕಾರ್ಯದರ್ಶಿ ಕೆ ಎಚ್ ಸಿರಾಜುದ್ದೀನ್ ಝುಹ್'ರಿ ಅಲ್ ಫುರ್ಖಾನಿ ವೇಣೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಸ್ಥೆಯ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಸಂಚಾಲಕ ನಾಸಿರ್ ಮಾಸ್ತರ್ ಬಂಡಾಡಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment