Posts

ನಿರ್ಗತಿಕರಿಗೆ ಅನ್ನದಾನ ಮಾಡುವ ಮೂಲಕ ಮಾಡಿದ ಸೇವೆಯ ಪ್ರತಿಫಲ ಖಚಿತ; ಯು.ಸಿ ಪೌಲೋಸ್

1 min read

ಸಿಯೋನ್ ಆಶ್ರಮವಾಸಿಗಳಿಗೆ ಅನ್ನದಾನದ ಮೂಲಕ ಪೃಥ್ವಿ ಜ್ಯುವೆಲ್ಸ್ ಮಾಲಿಕರ ಸ್ಮರಣೆ ದಿನ

ಬೆಳ್ತಂಗಡಿ; ಶೈಕ್ಷಣಿಕ ಪ್ರೋತ್ಸಾಹ, ಹಬ್ಬಗಳ ಆಚರಣೆ, ಸಂಘ ಸಂಸ್ಥೆಗಳ ಸಂಯೋಜನೆ ಇತ್ಯಾಧಿ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುತ್ತಿರುವ ಪೃಥ್ವಿ ಜ್ಯುವೆಲ್ಸ್ ಸಂಸ್ಥೆ ಯಾರೂ ಇಲ್ಲದ ನಿರ್ಗತಿಕರಿಗೆ ಅನ್ನದಾನ ಮಾಡುವ ಮೂಲಕ ಮಾಡಿದ ಸೇವೆಯ ಪ್ರತಿಫಲ ಸಂಸ್ಥೆಯ ಮಾಲಿಕರ ಆತ್ಮಕ್ಕೆ ಖಂಡಿತಾ‌ ಸಮರ್ಪಣೆಯಾಗಲಿದೆ ಎಂದು  ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇದರ ಟ್ರಸ್ಟಿ ಯು.ಸಿ ಪೌಲೋಸ್ ಹೇಳಿದರು..

ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂಸ್ಥೆಯ ಸಂಸ್ಥಾಪಕ ಮಾಲಿಕರಾಗಿದ್ದು ಕಳೆದ ವರ್ಷ  ನಿಧನರಾದ ಪಾರಸ್ ಮಲ್ ದಕ್ ಅವರ ವಾರ್ಷಿಕ ಸ್ಮರಣೆ ದಿನದ ಅಂಗವಾಗಿ ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದ ಆಶ್ರಮವಾಸಿಗಳಿಗೆ ಅನ್ನದಾನ ಮಾಡುವ ಮೂಲಕ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂಸ್ಥೆಯ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ  ಉಮಾನಾಥ ಪ್ರಭು ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ನಮ್ಮ ಜೀವನದಲ್ಲಿ ನಾವು ಏನೇ ಸಾಧಿಸಿದರೂ ಕೊನೆಗೆ ಉಳಿಯುವುದು ನೆನಪುಗಳು ಮಾತ್ರ. ಆದ್ದರಿಂದ ಸಂಸ್ಥೆಯ ಮಾಲಿಕರ ಸ್ಮರಣೆಯ ದಿನವನ್ನು ಈ ರೀತಿ ಆಚರಿಸಬೇಕೆಂದು ಸಂಕಲ್ಪಿಸಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಸಿಯೋನ್ ಆಶ್ರಮದ ಮೇರಿ ಯು.ಪಿ, ಶೋಭಾ ಯು.ಪಿ, ಸುಭಾಶ್ ಯು.ಪಿ. ಸೌಮ್ಯಾ ಯು.ಪಿ, ಮ್ಯಾಥ್ಯೂ ಸಿ.ಎ, ಲಿಡ್ವಿನ್ ಆಂಟೋನಿ ಇವರು ಉಪಸ್ಥಿತರಿದ್ದರು. ಪೃಥ್ವಿ ಸಂಸ್ಥೆಯ ಸಿಬ್ಬಂದಿಗಳಾದ ಹರಿಪ್ರಸಾದ್ ಪ್ರಭು, ಸತೀಶ್, ರಕ್ಷಾ ಇವರುಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾದರು. 

ಮುಹಮ್ಮದ್ ನಿಸಾರ್ ಸ್ವಾಗತಿಸಿ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment