ಬೆಳ್ತಂಗಡಿ: ಬೆಂಗಳೂರಿನ ಇಂಟರ್ನ್ಯಾಷನಲ್ ಟ್ರೈಪಾತ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರು ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಸವಣಾಲು ಶ್ರೀ ಲಕ್ಷ್ಮೀ ನಾರಾಯಣ ಎಜ್ಯುಕೇಶನ್ ಸೊಸೈಟಿ ಇದರ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ಅನುದಾನಿತ ಹಿ.ಪ್ರಾ ಶಾಲೆ ಸವಣಾಲು ಇಲ್ಲಿಗೆ
ಸಂಸ್ಥೆಯ 6 ಮಂದಿ ನಿರ್ದೇಶಕರಲ್ಲಿ ಓರ್ವರಾದ ಸವಣಾಲಿನ ಅಳಿಯ ಹಾಜಿ ಅಬ್ಬಾಸ್ ಖಾನ್ ಅವರು ಮೂರು ಲೇಪ್ಟಾಪ್ ಗಳನ್ನು ಕೊಡುಗೆ ನೀಡುವುದಾಗಿ ಘೋಷಿಸಿ, ಮಂಗಳವಾರ ಒಂದು ಲಾಪ್ಟಾಪ್ ಅನ್ನು ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಜಿ ಅವರಿಗೆ ಹಸ್ತಾಂತರಿಸಿದರು.
ಈಸಂದರ್ಭ ಅಬ್ಬಾಸ್ ಖಾನ್ ಅವರ ಪತ್ನಿ ಜಮೀಲಾ ಮಂಜದಬೆಟ್ಟು, ಅವರ ತಾಯಿ ರಹ್ಮತುನ್ನಿಸಾ, ಶಾಲಾ ಸಮಿತಿ ಅಧ್ಯಕ್ಷ ರಘುರಾಮ ಗಾಂಭೀರ ಎಸ್‌ಡಿಎಂಸಿ ಅಧ್ಯಕ್ಷ ಕೇಶವ ನಾಯ್ಕ, ರಾಜೇಶ್ ಭಟ್, ಜಯಾನಂದ ಪಿಲಿಕಲ, ಸಹಶಿಕ್ಷಿಕಿ ಮಹಾಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.